2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ಶಾರದಾ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಫಾತಿಮತ್ ಸಹಲಾ ಅವರು ಜಿಲ್ಲೆಗೇ ಪ್ರಥಮ ಸ್ಥಾನ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

​ಒಟ್ಟು ಆರು ವಿಷಯಗಳ ಪೈಕಿ ನಾಲ್ಕರಲ್ಲಿ ಇವರು ಪೂರ್ಣ ಅಂಕಗಳನ್ನು ಪಡೆದಿರುವುದು ವಿಶೇಷ. ಕನ್ನಡ, ಹಿಸ್ಟರಿ (ಇತಿಹಾಸ), ಪೊಲಿಟಿಕಲ್ ಸೈನ್ಸ್ (ರಾಜ್ಯಶಾಸ್ತ್ರ) ಹಾಗೂ ಸೋಷಿಯಾಲಜಿ (ಸಮಾಜಶಾಸ್ತ್ರ) ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಉಳಿದಂತೆ ಎಕನಾಮಿಕ್ಸ್‌ನಲ್ಲಿ 99 ಹಾಗೂ ಇಂಗ್ಲಿಷ್‌ನಲ್ಲಿ 96 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಈ ಪ್ರತಿಭಾವಂತ ವಿದ್ಯಾರ್ಥಿನಿ ಆಬಿದ್ ಪೈಚಾರ್ ಹಾಗೂ ಸಾಜಿದ ದಂಪತಿಯ ಪುತ್ರಿಯಾಗಿದ್ದಾರೆ.

Leave a Reply

Your email address will not be published. Required fields are marked *