ಸವಣೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸವಣೂರು ಗ್ರಾಮ ಸಮಿತಿ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಮಾಂತೂರು ಅಂಬೇಡ್ಕರ್ ಭವನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕೆನರಾರವರು ವಹಿಸಿದ್ದರು.
ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ ಎಸ್ ರಫೀಕ್‌ರವರು ಧ್ವಜರೋಹಣವನ್ನು ನೆರವೇರಿಸಿದರು.
ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷರು ಹಾಗೂ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಎಂ ಎ ರಫೀಕ್‌ರವರು ಸ್ವಾತಂತ್ರೋತ್ಸವದ ಸಂದೇಶ ಭಾಷಣ ಮಾಡಿದರು.

ವೇದಿಕೆಯಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು ಹಾಗೂ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಕೆನರಾ, ಬಾಬು ಎನ್ ಸವಣೂರು, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಷನ್ ಅಧ್ಯಕ್ಷರಾದ ಝಕರಿಯ ಮಾಂತೂರು, ಸಿ ಎ ನಝೀರ್ ಶಾಂತಿನಗರ, ಚಾಪಲ್ಲ ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿ ಸದಸ್ಯರಾದ ಶರೀಫ್ ಹಾಜಿ ಆರ್ತಿಕರೆ ಹಾಗೂ ಉಸ್ಮಾನ್ ಅತ್ತಿಕೆರೆ, ಪಣೆಮಜಲು ರಹ್ಮಾನಿಯಾ ಜುಮಾ ಮಸ್ಜಿದ್ ಕಾರ್ಯದರ್ಶಿಯಾದ ಎಸ್ ಎ ಹಂಝ ಸರ್ವೆ, ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ರಫೀಕ್ ಪಣೆಮಜಲು, ಸವಣೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಅಶ್ರಫ್ ಜನತಾರವರು ಉಪಸ್ಥಿತರಿದರು. ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಮಾನ್ ಸರ್ವೆ ಸ್ವಾಗತಿಸಿ, ಶಾಂತಿನಗರ ಬ್ರಾಂಚ್ ಕಾರ್ಯದರ್ಶಿ ನಝೀರ್ ಎಸ್‌ಎಂ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗೈದರು.