ಪಯನೀರ್ ಸಂಪಾಜೆ ಚಾಂಪಿಯನ್ – ಟೀಮ್ ಪೆರಾಜೆ ರನ್ನರ್ಸ್

ಕೊಯನಾಡು: ಯುನೈಟೆಡ್ ಕೊಯನಾಡು ವತಿಯಿಂದ ಅಕ್ಟೋಬರ್ 20 ರಂದು ಕೊಯನಾಡು ಮೈದಾನದಲ್ಲಿ ಫುಟ್ಬಾಲ್ ಪಂದ್ಯಾಟ ನಡೆಯಿತು. ಸ್ಥಳೀಯ ತಂಡಗಳಾದ ಕೊಯನಾಡು, ಸಂಪಾಜೆ, ಗೂನಡ್ಕ, ಪೆರಾಜೆ (A) ಮತ್ತು ಪೆರಾಜೆ (B) ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಐದು ತಂಡಗಳ ನಡುವೆ ನಡೆದ ರೋಚಕ ಪಂದ್ಯಾವಳಿಯಲ್ಲಿ ಪಯನೀರ್ ಸಂಪಾಜೆ ತಂಡ ಚಾಂಪಿಯನ್ ಪಟ್ಟವನ್ನು ಕೈಸೇರಿಸಿತು. ಟೀಮ್ ಪೆರಾಜೆ (A) ರನ್ನರ್ಸ್-ಅಪ್ ಗೌರವವನ್ನು ಗಳಿಸಿತು.

ವೈಯಕ್ತಿಕ ಪ್ರಶಸ್ತಿಗಳ ವಿಭಾಗದಲ್ಲಿ :

ಬೆಸ್ಟ್ ಗೋಲ್ ಕೀಪರ್: ಶಹಾಮ್ (ಸಂಪಾಜೆ), ಬೆಸ್ಟ್ ಡಿಫೆಂಡರ್: ಝಾಹೀರ್ (ಸಂಪಾಜೆ), ಬೆಸ್ಟ್ ಸ್ಟ್ರೈಕರ್: ನದೀಮ್ (ಪೆರಾಜೆ)

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುವ ಕಾಂಗ್ರೆಸ್ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಹನೀಫ್ ಎಸ್.ಪಿ, ಉಮ್ಮರ್ ಚೆಡಾವು, ರಹೀಮ್ ಚೆಡಾವು, ಫಹಲಾಝ್, ಸಮೀರ್ ಟಿ.ಎಚ್, ಇಂಶಾದ್ ಹಾಗೂ ಇತರರು ಉಪಸ್ಥಿತರಿದ್ದರು.ಪಂದ್ಯಾಟವನ್ನು ರುನೈಝ್ ಸುಸಂಘಟಿತವಾಗಿ ನಿರೂಪಿಸಿದರು.

ಯುನೈಟೆಡ್ ಕೊಯನಾಡು ವತಿಯಿಂದ ಆಯೋಜಿಸಲಾದ ಈ ಕ್ರೀಡಾ ಕಾರ್ಯಕ್ರಮ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ಸಂಪನ್ನವಾಯಿತು.

Leave a Reply

Your email address will not be published. Required fields are marked *