Nammasullia: ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವಿಶೇಷ ಅನುದಾನದಲ್ಲಿ ಸಂಪಾಜೆ ಗ್ರಾಮದ ಚಟ್ಟೆಕಲ್ಲು, ಮುಂಡಡ್ಕ, ದಂಡೆಕಜೆ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಟಿ ಎಂ ಶಾಹಿದ್ ತೆಕ್ಕಿಲ್  ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನದಲ್ಲಿ ಒಂದು ಕೋಟಿ ರೂಪಾಯಿ ಅನುದಾನ ನೀಡಿದ್ದು, ಈ ಭಾಗದ 3 ರಸ್ತೆಗಳಿಗೆ ₹35 ಲಕ್ಷ ಅನುದಾನ ಮೀಸಲಿರಿಸಿದ್ದೇವೆ. ಅಲ್ಲದೆ ಈ ಭಾಗದ ಚಟ್ಟೆಕಲ್ಲು ರಸ್ತೆ ಕಾಂಕ್ರಿಟ್ ಕಾಮಗಾರಿಗೆ ₹20 ಲಕ್ಷ ಅನುದಾನ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಯಡಿ ಮಂಜೂರಾಗಿದ್ದು ಶಾಸಕರು ಕೂಡ ಅನುದಾನ ನೀಡಿದ್ದು ಉತ್ತಮ ಕೆಲಸ ಮಾಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕಾ ಖರ್ಗೆ ಹಾಗೂ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಮಂಜುನಾಥ್ ಭಂಡಾರಿ ಹರೀಶ್ ಕುಮಾರ್ ಐವನ್ ಡಿಸೋಜ, ನಸೀರ್ ಅಹ್ಮದ್ ರವರ ವಿಶೇಷ ಅನುದಾನ ನಮ್ಮ ಗ್ರಾಮಕ್ಕೆ ದೊರಕಿದೆ ಎಂದು ಹೇಳಿ ಇನ್ನೂ ಹೆಚ್ಚಿನ ಅನುದಾನ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಡುವ ಭರವಸೆ ನೀಡಿದ್ದಾರೆ ಎಂದರು. ಗ್ರಾಮದ ಅಭಿವೃದ್ಧಿಯಿಂದ ಬಡತನ ನಿರ್ಮೂಲನ ಆಗಲಿದೆ, ಸಿದ್ದರಾಮಯ್ಯ ಸರಕಾರದ ಸಹಾಯ ಪ್ರತೀ ಮನೆಗೂ ತಲುಪಿದೆ ಎಂದು ಸಿದ್ದರಾಮಯ್ಯ ಸರಕಾರವನ್ನು ಅಭಿನಂದಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರುಗಳಾದ ಜಿ ಕೆ ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಜಗದೀಶ್ ರೈ, ಲಿಸ್ಸಿ ಮೊನಾಲಿಸಾ, ರಜನಿ ಶರತ್, ವಿಮಲಾ ಪ್ರಸಾದ್, ಅನುಪಮ, ವಿಜಯ ಕುಮಾರ್, ಸೊಸೈಟಿ ಉಪಾಧ್ಯಕ್ಷರಾದ ಬಿ. ಎಸ್. ಯಮುನಾ, ನಿರ್ದೇಶಕರಾದ ಗಣಪತಿ ಭಟ್, ಮಾಜಿ ಪಂಚಾಯತ್ ಸದಸ್ಯರುಗಳಾದ ಜಿ ರಾಮಚಂದ್ರ, ನಾಗೇಶ ಪಿ. ಆರ್, ತಾಜ್ ಮಹಮ್ಮದ್ ಸಂಪಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಫಯಾಜ್ ಹಾಗೂ ಸಹಾಯಕ ಇಂಜಿನಿಯರ್ ಮಣಿಕಂಠ, ನಿವೃತ ಪೋಸ್ಟ್ ಮಾಸ್ಟರ್ ಎಸ್ ಪಿ. ಲೋಕನಾಥ್, ನಿವೃತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಧರ್, ನಿವೃತ ಅಗ್ನಿ ಶಾಮಕ ದಳದ ಇನ್ಸ್ಪೆಕ್ಟರ್ ರಾಜಗೋಪಾಲ್, ನಿವೃತ ಆರ್ಮಿ ಅಧಿಕಾರಿ ವಾಸುದೇವ ಕಟ್ಟಮನೆ, ನಿವೃತ ಇಂಜಿನಿಯರ್ ಸುಬ್ರಮಣ್ಯ, ಕಂಟ್ರಾಕ್ಟರ್ ವಿ ವಿ. ಬಾಲನ್, ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ಕೆ. ಎಂ. ಅಶ್ರಫ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಕ್ರೈಸ್ತ ಸಮುದಾಯದ ಸಂಘದ ಅಧ್ಯಕ್ಷರಾದ ಸಂತೋಷ್ ಕ್ರಾಸ್ತಾ, ಬೂತ್ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ( ಉಪ್ಪಿ.),ಸಲೀಂ ಪೆರುಂಗೊಡಿ, ಲೋಕೇಶ್ ಬಾಚಿಗದ್ದೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಕಾಂತಿ ಬಿ ಎಸ್, ಅಂಗನವಾಡಿ ಕಾರ್ಯಕರ್ತೆ ಹರ್ಷಿತಾ ಕುಮಾರಿ, ಸಂಜೀವ ಪೂಜಾರಿ ಭೋಜ, ಪುಟ್ಟಣ್ಣ, ಸುರೇಶ್ ಕಡಿಕಡ್ಕ ನಿವೃತ ಪೊಲೀಸ್ ಅಧಿಕಾರಿ ಮಾಧವ ಗೌಡ ಪ್ರಶಾಂತ್ ವಿ .ವಿ, ರಜಾಕ್ ಕೆ. ಎ, ಹಸೈನಾರ್ ಚಟ್ಟೆಕಲ್ಲು, ಇರ್ಷಾದ್, ಕಲ್ಲುಗುಂಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಹನೀಫ್ ಚಟ್ಟೆಕಲ್ಲು, ಒಡಿಯೂರು ಸಂಘದ ಪ್ರೇರಕಿ ರತ್ನಾವತಿ, ವಾಣಿ, ಸೂದಾ, ರಫೀಕ್ ಕರಾವಳಿ, ಅಬೂಬಕ್ಕರ್ ಡ್ರೈವರ್, ಅಶ್ರಫ್ ಹಾಜಿ ಸಂಟ್ಯಾರ್ ಅಬ್ಬಾಸ್ ಕೆ. ಕೆ. ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಜಿ ಕೆ ಹಮೀದ್ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಕೆ ಹನೀಫ್ ಸಂಪಾಜೆ ವಂದಿಸಿದರು.

Leave a Reply

Your email address will not be published. Required fields are marked *