ದೇಶ ಕಂಡ ದಿಮಂತ ವ್ಯಕ್ತಿ , ಸ್ವಾತಂತ್ರ್ಯ ಹೋರಾಟಗಾರ (Freedom Fighter)ಶತಾಯುಷಿ ವಿ.ಎನ್ .ರೆಡ್ಡಿ (V N reddy) ಅವರು ವಯೋ ಸಹಜ ಖಾಯಿಲೆಯಿಂದ ಇಂದು ನಿಧನರಾಗಿದ್ದಾರೆ. ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವಿ.ಎನ್.ರೆಡ್ಡಿ (103) ಅವರು ಬ್ರಿಟಿಷರ ವಿರುದ್ಧ ಹೋರಾಡಿ ಅದೆಷ್ಟೋ ಬಾರಿ ಜೈಲುವಾಸ ಕೂಡ ಅನುಭವಿಸಿದ್ದವರು, ಇದೀಗ ವಯೋ ಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದ ವಿ.ಎನ್ .ರೆಡ್ಡಿ(103) ಅವರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ರಾಜ್ಯದ ನಾನಾ ಕಡೆ ಚಳುವಳಿಗಳಲ್ಲಿ ಭಾಗವಹಿಸಿದ್ದರು‌.

ಚಳುವಳಿ ಬಾಗಿಯಾಗಿದ್ದ ಬ್ರಿಟಿಷರ ಅನೇಕ ಬಾರಿ ಸೆರೆವಾಸಕ್ಕೆ ಒಳಪಡಿಸಿದ್ದರು. ಅಲ್ಲದೆ ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಕಲ್ಲೂರು ಸುಬ್ಬಾರಾವ್, ತರಿಮೆಲ ನಾಗಿರೆಡ್ಡಿ, ಎ.ಎಮ್ .ಲಿಂಗಣ್ಣ, ಪಪ್ಪೂರು ರಾಮಾಚಾರಿ ಜತೆ ಭಾಗವಹಿಸಿದ್ದರು.

ಇದೀಗ ಸ್ವತಂತ್ರ ಹೋರಾಟಗಾರರೇ ಈ ವಯೋಸಹಜ ಕಾಯಿಲೆಯಿಂದಾಗಿ ಕೊನೆಯುಸಿರೆಳೆದಿದ್ದು,ನಾಳೆ ವೆಂಕಟಾಪುರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Source: navasamaja.com

Leave a Reply

Your email address will not be published. Required fields are marked *