(ಎ.ಐ ಆದರಿತ ಚಿತ್ರ)

ಅರಂತೋಡು: ಇಲ್ಲಿನ ನಯಾರ (Nayara) ಪೆಟ್ರೋಲ್ ಬಂಕ್‌ನಲ್ಲಿ ಕಾರೊಂದು ಇಂಧನ ತುಂಬಿಸಿಕೊಂಡು, ಹಣ ಪಾವತಿಸದೆ ಪರಾರಿಯಾದ ಘಟನೆ ವರದಿಯಾಗಿದೆ.

ಅರಂತೋಡಿನ ನಯಾರಾ ಪೆಟ್ರೋಲ್ ಬಂಕ್‌ಗೆ ಬಿಳಿ ಬಣ್ಣದ ಆಲ್ಟೋ ಕಾರಿನಲ್ಲಿ (ನಂಬರ್: KL 14 X 111) ಬಂದ ಚಾಲಕ, ಸುಮಾರು 2,510 ರೂಪಾಯಿ ಮೊತ್ತದ ಪೆಟ್ರೋಲ್ ಹಾಕಿಸಿದ್ದಾನೆ. ಹಣ ಪಾವತಿಸುವ ವೇಳೆ ಕ್ಯೂಆರ್ ಕೋಡ್ ಸ್ಕ್ಯಾನರ್ ಫೋಟೋ ತೆಗೆದುಕೊಂಡ ಚಾಲಕ, ಹಣ ಪಾವತಿಯಾಗಿದೆ  ಅಲ್ಲಿಂದ ಹೊರಟಿದ್ದಾನೆ. ಆದರೆ ಹಣ ಜಮೆಯಾಗದಿದ್ದಾಗ ಬಂಕ್ ಸಿಬ್ಬಂದಿ ತಡೆಯಲು ಪ್ರಯತ್ನಿಸಿದರೂ ಚಾಲಕ ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿದ್ದಾನೆ.

ಬಳಿಕ ಜಾಲ್ಸೂರು ಚೆಕ್ ಪೋಸ್ಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ, ಆಟೋ ಚಾಲಕರು ಮತ್ತು ಜಾಲ್ಸೂರು ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರನ್ನು ತಡೆಯಲು ಪ್ರಯತ್ನಿಸಿದರೂ, ಚಾಲಕ ಕಾರನ್ನು ನಿಲ್ಲಿಸದೆ ಪುತ್ತೂರು ಕಡೆಗೆ ಪರಾರಿಯಾಗಿದ್ದಾನೆ.

ಪೊಲೀಸರ ಎಂಟ್ರಿ – ತಪ್ಪೊಪ್ಪಿಗೆ:

ಘಟನೆಗೆ ಸಂಬಂಧಿಸಿದಂತೆ ಬಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಾರಿನ ಆರ್‌ಸಿ (RC) ವಿವರಗಳ ಮೂಲಕ ಮಾಲೀಕನ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಕರೆ ಮಾಡಿದ್ದಾರೆ. ಪೊಲೀಸರ ಫೋನ್ ಕರೆ ಬರುತ್ತಿದ್ದಂತೆ ಚಾಲಕ, ಪಾವತಿಸಬೇಕಿದ್ದ ಹಣವನ್ನು ತಕ್ಷಣವೇ ಆನ್‌ಲೈನ್ ಮೂಲಕ ವರ್ಗಾಯಿಸಿ ಪ್ರಕರಣವನ್ನು ಅಲ್ಲಿಗೆ ಮುಕ್ತಾಯಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *