ಅಧ್ಯಕ್ಷರಾಗಿ ಹಸೈನಾರ್ ಜಯನಗರ ಪ್ರಧಾನ ಕಾರ್ಯದರ್ಶಿ ಸುಜಾತ ಭಟ್ ಆಯ್ಕೆ
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ ಕ ಜಿಲ್ಲೆ ಇದರ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರರವರು, ಪ್ರಧಾನ ಕಾರ್ಯದರ್ಶಿಯಾಗಿ ಕದಿಕಡ್ಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುಜಾತಾ ಭಟ್ ಜಾಲ್ಸೂರು, ಕೋಶಾಧಿಕಾರಿಯಾಗಿ ಶಂಕರ್ ಪೆರಾಜೆ ರವರು ಆಯ್ಕೆಯಾಗಿದ್ದಾರೆ. ಸೆ 20 ರಂದು ಸುಳ್ಯ ಶಿವ ಕೃಪ ಕಲಾಮಂದಿರದಲ್ಲಿ ನಡೆದ ಸಮಿತಿಯ ಮಹಾ ಸಭೆಯಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಮಂಗಳೂರು ಪಡಿ ಸಂಸ್ಥೆಯ ಮುಖ್ಯಸ್ಥೆ ತರಬೇತುದಾರರಾದ ಶ್ರೀಮತಿ ಕಸ್ತೂರಿ ಬೊಳುವಾರು, ಪಡಿ ಸಂಸ್ಥೆಯ ಸದಸ್ಯೆ ಹಾಗೂ ಪುತ್ತೂರು ನ್ಯಾಯಾಲಯದ ಪ್ಯಾನಲ್ ವಕೀಲೆ ಶ್ರೀಮತಿ ರಾಜೇಶ್ವರಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಬಗ್ಗೆ ಮಾಹಿತಿ ಶಿಬಿರವನ್ನು ನಡೆಸಿದರು. ಕಳೆದ ಸಾಲಿನ ವರದಿ ಹಾಗೂ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಮೋನಪ್ಪ ಕೊಳಗೆ ಮಂಡಿಸಿದರು. ಸಭಾಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶಂಕರ್ ಪೆರಾಜೆ ರವರು ವಹಿಸಿದ್ದರು. ನೂತನ ಸಾಲಿನ ಉಪಾಧ್ಯಕ್ಷರಾಗಿ ಶಾಂತಿ ನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾದ ನಝೀರ್ ಶಾಂತಿನಗರ,ಸಂಘಟನಾ ಕಾರ್ಯದರ್ಶಿಯಾಗಿ ಮೋನಪ್ಪ ಕೊಳಗೆ,ಸದಸ್ಯರುಗಳಾಗಿ ನಾರಾಯಣ ಕಿಲಂಗೋಡಿ, ವೆಂಕಟೇಶ್ ಭಟ್,ವೆಂಕಟ್ ಕೃಷ್ಣ ಆಚಾರ್ಯ, ಅಬ್ದುಲ್ಲಾ ಅಜ್ಜಾವರ, ಅಶೋಕ್ ಪೀಚೆ, ಉನೈಸ್ ಪೆರಾಜೆ, ಚಿದಾನಂದ ಕುದ್ಪಾಜೆ, ಶ್ರೀಮತಿ ಮಂಜುಳಾ ಬಡಿಗೇರ್, ಲಲಿತಾ ಚಂದ್ರ ಶೇಖರ್,ಲತಾ ರೈ ಬೂಡು ಇವರು ಆಯ್ಕೆ ಯಾದರು.
ಮೋನಪ್ಪ ಕೊಳಗೆ ಸ್ವಾಗತಿಸಿ ವಂದಿಸಿದರು. ನಾರಾಯಣ ಕಿಲಂಗೋಡಿ ನಿರೂಪಿಸಿದರು.
