ಚಾಂಪಿಯನ್ ತಂಡವಾಗಿ ಸ್ಪೋರ್ಟಿಂಗ್ ರೆಂಜಿಲಾಡಿ, ರನ್ನರ್ ಅಪ್ ಯುನೈಟೆಡ್ ಅರಂಬೂರು

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜ್ ನ ಅಮೃತ ಮಹೋತ್ಸವದ ಅಂಗವಾಗಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ನ ವತಿಯಿಂದ ಎರಡು ದಿನಗಳ ಕಾಲ ಬಹಳ ಅದ್ದೂರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜೂನಿಯರ್ ಕಾಲೇಜ್ ಮೈದಾನದಲ್ಲಿ ಡಿ 13 ಮತ್ತು 14 ನೇ ದಿನಾಂಕ ದಂದು ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ಎಂಸಿಸಿ ಕ್ಲಬ್ ನ ಗೌರವ ಸಲಹೆಗಾರರಾದ ಪ್ರಸನ್ನ ಕುಮಾರ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ವೇದಿಕೆಯ ಅಧ್ಯಕ್ಷತೆಯನ್ನು ಕಾಲೇಜ್,’ನ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪಿ. ಬಿ. ಸುಧಾಕರ್ ರೈ, ಅಮೃತ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಲಿಂಗಪ್ಪ ಗೌಡ ಕೇರ್ಪಳ, ಅಮೃತ ಮಹೋತ್ಸವ ಕ್ರಿಕೆಟ್ ಸಮಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಪ್ರಾಂಜಲಿ ನೆಟವರ್ಕ್ ನ ಮಾಲಕರಾದ ಸುಧಾಕರ್ ರೈ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ರೆಹಮಾನ್ ಕಾವು, ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಆಹ್ವಾನಿತ 14 ತಂಡಗಳು ಭಾಗವಹಿಸಿ ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿ ವೀಕ್ಷರಿಗೆ ಕ್ರಿಕೆಟ್ ಹಬ್ಬದ ವಾತಾವರಣವನ್ನು ನೀಡಿತು. ಅಂತಿಮವಾಗಿ ಪುತ್ತೂರು ತಾಲೂಕಿನ ಸ್ಪೋಟಿಂಗ್ ರೆಂಜಿಲಾಡಿ ಚಾಂಪಿಯನ್ ಪಟ್ಟ ಪಡೆದರೆ ಯುನೈಟೆಡ್ ಆರಂಬೂರು ರನ್ನರ್ಸ್ ಸ್ಥಾನವನ್ನು ಪಡೆದುಕೊಂಡಿತು.

ಡಿ14 ರಂದು ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಂಸಿಸಿ ಕ್ಲಬ್ ಅಧ್ಯಕ್ಷರಾದ ರಂಜಿತ್ ರವರು ವಹಿಸಿದ್ದರು. ಬಹುಮಾನ ವಿತರಕರಾಗಿ ಲಯನ್ ದಯಾನಂದ ಡಿ. ಕೆ. ಮುಖ್ಯ ಅತಿಥಿಗಳಾಗಿ ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಬಿ. ಸದಾಶಿವ, ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಹಸೈನಾರ್ ಜಯನಗರ, ಮುಖಂಡರುಗಳಾದ ಇಕ್ಬಾಲ್ ಹುಸೈನ್, ರೆಹಮಾನ್ ಕಾವು, ಎಂಸಿಸಿ ಸ್ಥಾಪಕ ಅಧ್ಯಕ್ಷರಾದ ಹಂಝ ಕಾತೂನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಂ ಸಿ ಸಿ ತಂಡದ ಹಿರಿಯ ಸದಸ್ಯರಾದ ನಿವೃತ್ತ ದೈಹಿಕ ಶಿಕ್ಷಕ ನಟರಾಜ್, ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯರಾಗಿ ಆಯ್ಕೆಗೊಂಡ ಗಿರೀಶ್ ಅಡ್ಪಂಗಾಯ ರವರಿಗೆ ಗೌರವ ಸನ್ಮಾನ ನಡೆಯಿತು.

ಎಂಸಿಸಿ ಸಮಿತಿ ಕಾರ್ಯದರ್ಶಿ ಬಷೀರ್ ಪೈಂಬೆಚ್ಚಾಲ್ ಸ್ವಾಗತಿಸಿ, ಎಂಸಿಸಿ ಅಧ್ಯಕ್ಷರಾದ ರಂಜಿತ್ ಕೆ. ಆರ್ ವಂದಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *