ದುಗ್ಗಲಡ್ಕ: ಇಲ್ಲಿನ ಶಿವಾಜಿ ಫ್ರೆಂಡ್ಸ್ ದುಗ್ಗಲಡ್ಕ ಇದರ ಆಶ್ರಯದಲ್ಲಿ ಫೆಬ್ರವರಿ 1ರಂದು (ನಾಳೆ) ನಡೆಯಲಿರುವ ದ್ವಿತೀಯ ವರ್ಷದ ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಪಂದ್ಯಾಟದ ಪ್ರಯುಕ್ತ, 4G ದುಗ್ಗಲಡ್ಕ ತಂಡದ ನೂತನ ಜರ್ಸಿ ಬಿಡುಗಡೆ ಸಮಾರಂಭವು ಇಂದು (ಶನಿವಾರ) ನಡೆಯಿತು.

ನಾಳೆ ನಡೆಯಲಿರುವ ಹಗ್ಗಜಗ್ಗಾಟದ ಸಂಭ್ರಮಕ್ಕೆ ಮುನ್ನೋಟ ಎಂಬಂತೆ, ಅಧಿಕೃತ ಜರ್ಸಿಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಇಬ್ರಾಹಿಂ ಕೊಳಂಜಿಕೋಡಿ, ಹಸೇನಾರ್ ಕೊಳಂಜಿಗೋಡಿ, ಸಿದ್ದೀಕ್, ಅಬ್ದುಲ್ಲ ಅದ್ದು, ಮಹರೂಫ್ ಮಹಮ್ಮದ್, ಆರಿಫ್ ನೀರಬಿದಿರೆ, ರಫೀಕ್ ದುಗ್ಗಲಡ್ಕ ಉಪಸ್ಥಿತರಿದ್ದರು
ನಾಳೆ ಪಂದ್ಯಾಟ:
ನಾಳೆ (ಆದಿತ್ಯವಾರ) ಬೆಳಿಗ್ಗೆ 11:00 ಗಂಟೆಗೆ ಸರಿಯಾಗಿ ದುಗ್ಗುಲಡ್ಕದ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಹಗ್ಗಜಗ್ಗಾಟ ಪಂದ್ಯಾಟಗಳು ಆರಂಭಗೊಳ್ಳಲಿವೆ. ಪುರುಷರ ವಿಭಾಗದಲ್ಲಿ 12 ತಂಡಗಳ ಲೀಗ್ ಮಾದರಿಯ ಹಾಗೂ ಮಹಿಳೆಯರ ವಿಭಾಗದಲ್ಲಿ ಮುಕ್ತ ಹಗ್ಗಜಗ್ಗಾಟ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಶಿವಾಜಿ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
