ಸುಳ್ಯ: ಸುಳ್ಯದ ರಥಬೀದಿಯಲ್ಲಿರುವ ‘ಕಟ್ಟೆಕ್ಕಾರ್ ಶೂ ಶಾಪ್ ಇನ್’ ಪಾಲುದಾರರಾದ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ (55) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (ಫೆಬ್ರವರಿ 3) ನಾವೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಸುಳ್ಯದ ನಾವೂರು ನಿವಾಸಿಯಾಗಿದ್ದರು. ಅನಾರೋಗ್ಯದ ಕಾರಣದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಸಹೋದರರನ್ನು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಸುಳ್ಯದ ವರ್ತಕ ವಲಯದಲ್ಲಿ ಹಿದಾಯತ್ತುಲ್ಲಾ ಅವರು ಚಿರಪರಿಚಿತರಾಗಿದ್ದರು. ಅವರ ನಿಧನಕ್ಕೆ ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
