ಸುಳ್ಯ: ನಗರ ಪಂಚಾಯತ್’ನ ವಠಾರದಲ್ಲಿ ಶೇಖರಿಸಿರುವ ಕಸದ ರಾಶಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಇಂದು ಬೆಳಿಗ್ಗೆ ಕಂಡುಬಂದಿದೆ. ತಕ್ಷಣ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉರಗ ಪ್ರೇಮಿ ಮೋಹನ್ ರಿಗೆ ಮಾಹಿತಿ ನೀಡಿದರು, ಸ್ಥಳಕ್ಕೆ ಆಗಮಿಸಿದ ಮೋಹನ್ ರವರು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯ ಮಾಡಿದರು.
