ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ & ವಾಣಿಜ್ಯ ಸಂಘ ಸಮಾಜ ಕಾರ್ಯ ವಿಭಾಗ ಹಾಗೂ ಐ. ಕ್ಯೂ.ಎ.ಸಿ ವತಿಯಿಂದ 5 ದಿನದ ಐ.ಬಿ. ಎಮ್ ಸ್ಕಿಲ್ ಬಿಲ್ಡ್ ತರಬೇತಿ ಕಾರ್ಯಾಗಾರ ಕಾರ್ಯಕ್ರಮಕ್ಕೆ ಆ. 18ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ರುದ್ರ ಕುಮಾರ್ ಎಮ್. ಎಮ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಷನ್ ಇದರ ಡಿಸ್ಟಿಕ್ ಪ್ರೋಗ್ರಾಮ್ ಆಫೀಸರ್ ಸುಬ್ರಮಣಿ ಪಿ. ವಿ, ಹಾಗೂ ತರಬೇತುದಾರಾರಾದ ಅವಿನಾಶ್, ಮೊಹಮ್ಮದ್ ಅಜಿಮ್ , ಜಯ್ದೆನ್ ಡಿಯೋನ್ ಡಿಸೋಜ, ಉಪಸ್ಥಿತರಿದ್ದು ಮಾಹಿತಿ ನೀಡಲಿದ್ದಾರೆ. ತರಬೇತುದಾರರಾದ ಸುಬ್ರಮಣಿ ಪಿ. ವಿ, ಮಾತನಾಡಿ ಈ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ತರಬೇತಿಗಳು ವಿದ್ಯಾರ್ಥಿಗಳಿಗೆ ಅತೀ ಅಗತ್ಯ ಹಾಗೂ ತರಬೇತಿಯಲ್ಲಿ ಪಾಲ್ಗೊಂಡು ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ದಿವ್ಯಾ ಟಿ. ಎಸ್ ಶ್ರೀಧರ್ ವಿ, ಐ.ಕ್ಯೂ.ಎ.ಸಿ ಸಂಯೋಜಕಿ ಡಾ ಮಮತಾ ಕೆ, ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ಗೀತಾ ಶೆಣೈ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ದಿವ್ಯಾ ಟಿ. ಎಸ್ ಸ್ವಾಗತಿಸಿದರು ತೃತೀಯ ಬಿ. ಕಾಂ ವಿದ್ಯಾರ್ಥಿಗಳಾದ ತುಳಸಿ ಪ್ರಾರ್ಥಿಸಿ. ಪವನ್ ಕೆ, ಚಷ್ಮ, ಮೇಘನಾ, ಸುಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ಹರ್ಷಿತ್ ಕೆ. ಎಲ್ ಧನ್ಯವಾದಗೈದರು. ದೀಕ್ಷಿತಾ ಜಿ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
