ಪ್ರಕೃತಿ ಅಪಾರ ಸಂಶೋಧನೆಗಳ ಆಗರ: ಡಾ. ನವೀನ್

ಪ್ರಕೃತಿ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರೇರಣೆ ಉಪನ್ಯಾಸ

ಎನ್ನೆಂಸಿ ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ಇದರ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಗಸ್ಟ್ 7ನೇ ಗುರುವಾರದಂದು ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆಯಿತು.

ವಾರ್ಷಿಕ ಚಟುವಟಿಕೆಗಳ ಭಿತ್ತಿಚಿತ್ರ ಅನಾವರಣಗೊಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ಅವಧಿಯಲ್ಲಿ ಮಾತನಾಡಿದ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಡಾ. ನವೀನ್ ಜಿ ಪಿ ಎ ಎನ್, ಪ್ರಕೃತಿ ಅಪಾರ ಸಂಶೋಧನೆಗಳ ಆಗರ. ಪ್ರಕೃತಿಯ ಜೀವ ಜಾಲಗಳು, ವೈವಿಧ್ಯಮಯ ಅಂಶಗಳು ವೈಜ್ಞಾನಿಕ ಅನ್ವೇಷಣೆಗಳಿಗೆ ಹೇಗೆ ಪ್ರೇರಣೆಯಾಗಿದೆ ಎಂಬುದನ್ನು ಆಸಕ್ತಿದಾಯಕ ರೀತಿಯಲ್ಲಿ ವಿವರಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸಿಕೊಳ್ಳಲು ಪ್ರಯತ್ನಿಸೋಣ ಎಂದು ಅಭಿಪ್ರಾಯಪಟ್ಟರು. ತಾನು ನೆಟ್ಟು ಬೆಳೆಸಿದ ಗಿಡಗಳು ಫಲ ಕೊಡುವಾಗ ಆದ ಸಂತೋಷದ ಸಂದರ್ಭವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ಮಾತನಾಡಿ, ನೇಚರ್ ಕ್ಲಬ್ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ಕಾರ್ಯಕ್ರಮದ ತಯಾರಿ ಶ್ಲಾಘನೀಯ ಎಂದು ನೇಚರ್ ಕ್ಲಬ್ ನ ಮುಂದಿನ ಕಾರ್ಯ ಚಟುವಟಿಕೆಗಳ ಯಶಸ್ಸಿಗೆ ಶುಭ ಹಾರೈಸಿದರು.

ನೇಚರ್ ಕ್ಲಬ್ ಸದಸ್ಯೆ ಅಭಿಜ್ಞಾ ಪ್ರಾರ್ಥಿಸಿ, ಅಂತಿಮ ಜೀವ ವಿಜ್ಞಾನ ಪದವಿಯ ಕೀರ್ತಿಕಾ ಯು ಎಸ್ ಸ್ವಾಗತಿಸಿದರು. ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ, ಕ್ಲಬ್ ನ ಕಾರ್ಯದರ್ಶಿ ಅಕ್ಷತಾ ವಾರ್ಷಿಕ ವರದಿಯನ್ನು, ಕೋಶಾಧಿಕಾರಿ ಚೈತ್ರ ಮುಂದಿನ ಕಾರ್ಯ ಯೋಜನೆಗಳ ಪಟ್ಟಿಯನ್ನು ವಾಚಿಸಿದರು. ನೇಚರ್ ಕ್ಲಬ್ ಸದಸ್ಯರಾದ ತನುಶ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಸಾನಿಧ್ಯ ವಂದಿಸಿದರು. ತೃತೀಯ ಜೀವವಿಜ್ಞಾನ ಪದವಿಯ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಜೀವ ವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಕೃತಿಕಾ, ಪಲ್ಲವಿ, ಜಿತೇಶ್ ಮತ್ತು ಅಭಿಜ್ಞ ಹಾಗೂ ಸಿಬ್ಬಂದಿಗಳಾದ ಜಯಂತಿ, ಭವ್ಯ, ಗೀತಾ, ಶಿವಾನಂದ ಹಾಗೂ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.

Leave a Reply

Your email address will not be published. Required fields are marked *