ನೆಹರೂ ಮೆಮೋರಿಯಲ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಇಂಗ್ಲಿಷ್ ವಿಭಾಗವು ಅಂತರರಾಷ್ಟ್ರೀಯ ಅನುವಾದ ದಿನದ ಭಾಗವಾಗಿ ಅನುವಾದದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್ 30ನೇ ಮಂಗಳವಾರ ಏರ್ಪಡಿಸಲಾಗಿತ್ತು.

ಪತ್ರಕರ್ತೆ, ಸಂಪಾದಕಿ, ಬರಹಗಾರ್ತಿ ಹಾಗೂ ಅನುವಾದಕಿ ಆಗಿರುವ ಭವ್ಯ ಬೊಳ್ಳೂರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಅನುವಾದದ ಕುರಿತು ಮಾಹಿತಿ ನೀಡಿದರು. ಅನುವಾದದ ವಿವಿಧತೆ ಮತ್ತು ಅವಕಾಶಗಳು ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಕನ್ನಡ ಉಪನ್ಯಾಸಕರಾದ ಸಂಜೀವ ಕುಡ್ಪಾಜೆಯವರು ಕಾರ್ಯಕ್ರಮದ ಅದ್ಯಕ್ಷತೆಯನ್ನ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ ಡಿ ಹಾಗು ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ ಉಪಸ್ಥಿತರಿದ್ದರು. ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಭವ್ಯ ರಜತ್ ಕಾರ್ಯಕ್ರಮ ಸಂಘಟಿಸಿದರು.

Leave a Reply

Your email address will not be published. Required fields are marked *