ವಿಶ್ವಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಲೋಕ ಮುಸ್ಲಿಮರು ಸಜ್ಜಾಗಿದ್ದಾರೆ. ಪುಣ್ಯ ಪ್ರವಾದಿಯರ ಜನ್ಮದಿನದಿಂದ ಅನುಗ್ರಹೀತಗೊಂಡ ಪುಣ್ಯ ರಬೀಉಲ್ ಅವ್ವಲ್ ತಿಂಗಳ ಆಗಮನವಾಗುತ್ತಿದೆ. ನಾಳೆ ಆಗಸ್ಟ್ 24 ರಂದು ಆದಿತ್ಯವಾರ ಮಗ್ರಿಬ್ ನಂತರ ತ್ವೈಬಾ ಎಜುಕೇಷನಲ್ ಸೆಂಟರ್ ಈಶ್ವರಮಂಗಲದಲ್ಲಿ ಪ್ರಖ್ಯಾತ ವಾಗ್ಮಿ, ತನ್ನ ಅಗಾಧ ಪಾಂಡಿತ್ಯ ಮತ್ತು ಜ್ಞಾನದೊಂದಿಗೆ ಸ್ಪಷ್ಟ, ನಿರರ್ಗಳ ಪ್ರಭಾಷಣದ ಮೂಲಕ ಜನಮನಗೆದ್ದ ಪ್ರಭಾಷಣ ಲೋಕದ ತಾರೆ ಬಹುಮಾನ್ಯರಾದ ನೌಫಲ್ ಸಖಾಫಿ ಕಳಸ ಉಸ್ತಾದ್ ರವರಿಂದ ಬೃಹತ್ ಹುಬ್ಬುರ್ರಸೂಲ್ ಪ್ರಭಾಷಣ ನಡೆಯಲಿದೆ. ಸಾಧ್ಯವಿರುವ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
