ಐವರ್ನಾಡು: ಇಲ್ಲಿನ ಫ್ಯಾಕ್ಟರಿ ಬಳಿ 16 ವರ್ಷದ ಬಾಲಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರಪಟ್ಟ ಯುವಕ ಕೌಶಿಕ್ ಎಂದು ತಿಳಿದು ಬಂದಿದೆ. ಗ್ರೌಂಡ್ ಪಕ್ಕದಲ್ಲಿರುವ ಬಾವಿಗೆ ಬಾಲಕ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಬಾವಿಗೆ ಅವರು ಹೇಗೆ ಬಿದ್ದಿದ್ದಾರೆ ಎನ್ನುವುದು ಇನ್ನೂ ತಿಳಿದಿಲ್ಲ. ಸ್ಥಳಕ್ಕೆ ಊರವರು ಆಗಮಿಸಿ, ಬಾವಿಗೆ ಇಳಿದು ಪತ್ತೆ ಕಾರ್ಯ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.