ಸಮಸ್ತ ಸೆಂಚುನರಿ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿ ಸಾಧಕ ಮುಅಲ್ಲಿಮರಿಗೆ ಗೌರವಾರ್ಪಣೆಯಾಗಿ ನೀಡಿದ ಮುಅಲ್ಲಿಂ ಅವಾರ್ಡ್ ಗಳನ್ನು ಮಂಗಳೂರಿನ ಪುರಭವನದಲ್ಲಿ ನಡೆದ ಮುಅಲ್ಲಿಂ ಜಿಲ್ಲಾ ಸಮ್ಮೇಳನದಲ್ಲಿ ಎಸ್ ಜೆ ಎಂ ಕೇಂದ್ರ ಸಮಿತಿ ಅಧ್ಯಕ್ಷರಾದ ಅಮೀನು ಶ್ಶರೀಅಃ ಅಸ್ಸೆಯ್ಯಿದ್ ಅಲೀ ಬಾಫಖಿ ತಂಙಳ್ ರವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಖುದುವತ್ತುಸ್ಸಾದಾತ್ ಅಸ್ಸೆಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಲ್ ,ಝೈನುಲ್ ಉಲಮಾ ಮಾಣಿ ಉಸ್ತಾದ್,ಎಸ್ ಜೆ ಎಂ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸಹಿತ ಅನೇಕ ಗಣ್ಯರುಗಳು ಹಾಗೂ
ಸಾವಿರದಷ್ಟು ಮುಅಲ್ಲಿಮರು ಉಪಸ್ಥಿಯಲ್ಲಿದ್ದರು.
ಈ ಸಂಧಂರ್ಭ ಪ್ರಸ್ತುತ ಅವಾರ್ಡೆ ಗೆ ಆಯ್ಕೆಯಾದ ಮುಅಲ್ಲಿಮರುಗಳ ಪೈಕಿ ಬುಸ್ತಾನುಲ್ ಉಲೂಂ ಮದ್ರಸ ಜಟ್ಟಿಪಳ್ಳ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರು ಅವಾರ್ಡನ್ನು ಪಡೆದುಕೊಂಡರು.ಈ ಸಂಧಂರ್ಭ ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ,ಎಸ್ ಎಂ ಎ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಲತೀಫ್ ಹರ್ಲಡ್ಕ,ಎಸ್ ಎಂ ಎ ಸುಳ್ಯ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣಮೂಲೆ ಮುಂತಾದ ಪ್ರಮುಖರು ಜೊತೆಯಾಗಿದ್ದರು.
ಪ್ರಸ್ತುತ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರು ಗಾಂಧಿನಗರದ ಕೇಂದ್ರ ಮದ್ರಸದಲ್ಲಿ ಸೇವೆಗೈದು, ಸುಳ್ಯ ರೇಂಜ್ ಪ್ರಧಾನ ಕಾರ್ಯದರ್ಶಿಗಳಾಗಿ ,ಎರಡು ವರ್ಷಗಳಿಂದ ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸ ಸದರ್ ಮುಅಲ್ಲಿಮರಾಗಿ ಸೇವೆಗೈಯ್ಯುತ್ತಿದ್ದು,ಪಠ್ಯದ ಜೊತೆಯಲ್ಲೇ ಅನೇಕ ಪಠ್ಯೇತರ ಚಟುವಟಿಕೆಗಳೊಂದಿಗೆ ನಾಡಿನ ಗಮನ ಸೆಳೆಯುತ್ತಿದ್ದು, ಇದು ರಾಜ್ಯ ಮಟ್ಟದ ಅವಾರ್ಡ್ ಪಡೆಯಲು ಸಹಕಾರಿಯಾಯಿತು.



