ಪುಟಾಣಿ ಮಕ್ಕಳ ಕಲಾ ಸಾಂಸ್ಕೃತಿಕ ಮಹೋತ್ಸವ ಹಾಗೂ ಪ್ರವಾದಿ ಸಂದೇಶ
ಈದ್ ಮಿಲಾದ್ ತಿಂಗಳ ಅಂಗವಾಗಿ ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಅಂಡ್ ಮದ್ರಸಾದಲ್ಲಿ ಪ್ರಕಾಶಮಯ ಮದೀನಾ ಎಂಬ ಮೀಲಾದ್ ಸಂದೇಶ ಕಾರ್ಯಕ್ರಮ ಸೆ 21 ರಂದು ನಡೆಯಿತು. ಬೆಳಿಗ್ಗೆ 10 ಗಂಟೆಗೆ ಮದ್ರಸಾ ಪುಟಾಣಿ ವಿದ್ಯಾರ್ಥಿಗಳ ಸಾಹಿತ್ಯ ಕಲಾ ಸ್ಪರ್ಧಾ ಕಾರ್ಯಕ್ರಮಗಳು ನಡೆದು ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಸಂಜೆ ನಮಾಜ್ ಬಳಿಕ ಮೌಲೂದ್ ಪಾರಾಯಣ ಹಾಗೂ ಮಗರಿಬ್ ನಮಾಜಿನ ಬಳಿಕ ಮಾಸಿಕ ಸಯ್ಯಿದ್ ಝೃನುಲ್ ಆಬಿದೀನ್ ತಂಙಳ್ ರವರ ನೇತೃತ್ವದಲ್ಲಿ ಅಜ್ಮೀರ್ ಮೌಲೂದ್ ಪಾರಾಯಣ ನಡೆಯಿತು. ರಾತ್ರಿ ಎಂಟು ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಮೊಗರ್ಪಣೆ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಖಾದರ್ ಸಕಾಫಿ ಅಲ್ ಖಾಮಿಲ್ ರವರಿಂದ ಮಿಲಾದ್ ಸಂದೇಶ ಪ್ರಭಾಷಣ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸಾ ಸಮಿತಿಯ ಅಧ್ಯಕ್ಷ ಹನೀಫ್ ಜಯನಗರ ವಹಿಸಿದ್ದರು. ವೇದಿಕೆಯಲ್ಲಿ ಮೊಗರ್ಪಣೆ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಸದಸ್ಯರು
ಗಳಾದ ಜಿ ಕೆ ಅಬ್ದುಲ್ ರಜಾಕ್, ಅಬ್ದುಲ್ ಖಾದರ್ ಅಂದು, ನೂರುಲ್ ಇಸ್ಲಾಂ ಮದ್ರಸಾ ಸದರ್ ಮೊಅಲ್ಲಿಂ ಅಬ್ದುಲ್ ಕರೀಂ ಸಕಾಫಿ, ಮೊಅಲ್ಲಿಮರಾದ ಹಂಝ ಸಖಾಫಿ, ಯೂಸುಫ್ ಮದನಿ, ಅಬೂಬಕ್ಕರ್ ಸಿದ್ದೀಕ್ ಸಅದಿ, ಅಬ್ದುಲ್ ನಾಸಿರ್ ಸಖಾಫಿ, ಜಯನಗರ ಮಸೀದಿ ಕಮಿಟಿಯ ಉಪಾಧ್ಯಕ್ಷ ಜಾಹೀರ್ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸ್ಥಳೀಯ ಮದ್ರಸಾ ಸದರ್ ಮುಅಲ್ಲಿಂ ಶಫೀಕ್ ನಹೀಮಿ ಉಸ್ತಾದ್ ರವರಿಗೆ ಸಮಿತಿ ಹಾಗೂ ಯೂತ್ ಫ್ರೆಂಡ್ಸ್ ವತಿಯಿಂದ ಸ್ಮರಣಿಕೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಸಹಕರಿಸಿದ ಉಸ್ತಾದ್ ರವರಿಗೂ,ಸ್ಥಳೀಯ ಯುವಕರ ತಂಡದ ಸದಸ್ಯರುಗಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಶೇಷವಾಗಿ ಫ್ರೆಂಡ್ಸ್ ಜಯನಗರ ತಂಡದ ಸದಸ್ಯರುಗಳು ಮೀಲಾದ್ ತಟ್ಟು ಕಡ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಹಾಗೂ ಸಾರ್ವಜನಿಕರಿಗೆ ಸಿಹಿ ತಿನಿಸು ಹಾಗೂ ಫಲಹಾರ ತಂಪು ಪಾನೀಯದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶರೀಫ್ ಜಯನಗರ ಸ್ವಾಗತಿಸಿ ಸದರ್ ಮೊಅಲ್ಲಿಂ ಶಫೀಕ್ ನಹೀಮಿ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ಭಾಗದ ನೂರಾರು ಮಂದಿ ಮುಸಲ್ಮಾನ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.