ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ತರಬೇತಿ ನೀಡುವ ಉದ್ದೇಶದಿಂದ ನೂತನವಾಗಿ ರೂಪುಗೊಂಡ ವಿದ್ಯಾಸಂಸ್ಥೆ ಜ್ಞಾನಾಮೃತ ಟ್ಯೂಷನ್ ಸೆಂಟರ್ ಡಿ.25 ರಂದು ಅರಂತೋಡು ಮುಖ್ಯ ರಸ್ತೆಯಲ್ಲಿರುವ ಪುಷ್ಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಂಡಿತು.ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ನಿವೃತ ಪ್ರಾಂಶುಪಾಲ.ಕೆ. ಆರ್.ಗಂಗಾಧರ ದೀಪ ಬೆಳಗಿಸಿ ಉದ್ಘಾಟಿಸಿದರು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ,ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕ ಸೋಮ ಶೇಖರ ಪಿಂಡಿಮನೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತೊಡಿಕಾನ ಮೆತ್ತಡ್ಕ ಪಾರೆಪ್ಪಾಡಿ ಕುಟುಂಬ ಹಿರಿಯರಾದ ಶ್ರೀನಿವಾಸ ಮೆತ್ತಡ್ಕ ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪಂಜಿ ಕೋಡಿ,ಕಟ್ಟಡ ಮಾಲಕ ಸೀತಾರಾಮ ಉಳುವಾರು,ತಿರ್ಥಕುಮಾರ ಮುಂಡೋಡಿ, ತಿಮ್ಮಯ್ಯ ಮೆತ್ತಡ್ಕ ಮಾಜಿ ಸೈನಿಕ ಹುಕ್ರಪ್ಪ, ರಮಾನಂದ ಬಾಳಕಜೆ,ತಿರ್ಥೆಶ್ ಪಾರೆಪಾಡಿ,ಪಾವನ ಅಳಿಕೆ, ಕು.ಸುಶ್ಮಾ ರವರ ತಂದೆ ಬಾಲಕೃಷ್ಣ ತಾಯಿ ಹೇಮಾವತಿ,ಚೈತ್ರ ಬಾಳಕಜೆ ಇದ್ದರು. ಸುಷ್ಮಾ ಸ್ವಾಗತಿಸಿ,ಅರಂತೋಡು ಅಂಗನವಾಡಿ ಶಿಕ್ಷಕಿ ಹೊನ್ನಮ್ಮ,ಧನ್ಯವಾದ ಸಮರ್ಪಿಸಿದರು .ಪೃಥ್ವಿ ಪ್ರಾರ್ಥಿಸಿ,ನೆಲ್ಲಿಕುಮೇರಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಧರ್ಮಕಲ ಕಾರ್ಯಕ್ರಮ ನಿರೂಪಿಸಿದರು. 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಮತ್ತು ವಿಜ್ಞಾನ ವಿಭಾಗದ ಪಿಯುಸಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಟ್ಯೂಷನ್ ನೀಡಲಾಗುವುದು.ಮುಂದಿನ ದಿನಗಳಲ್ಲಿ ಮೊರಾರ್ಜಿ ಮತ್ತು ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರ ವಿಶೇಷ ತರಗತಿ ನಡೆಸಲಾಗುವುದು ಎಂದು ಕು. ಸುಶ್ಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *