ಶೈಕ್ಷಣಿಕ ಕಾರ್ಯಗಾರ, ಸಾಧಕರಿಗೆ ಸನ್ಮಾನ

ಸುಳ್ಯದಲ್ಲಿ ಕೆ ಎ ನಾಲೆಜ್ ಸೆಂಟರ್‌ನ ಉದ್ಘಾಟನಾ ಸಮಾರಂಭ, ಶೈಕ್ಷಣಿಕ ಕಾರ್ಯಗಾರ ಹಾಗೂ ಸಾಧಕರಿಗೆ ಮತ್ತು ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿಸೆಂಬರ್ 29ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿಯ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹೀದ್, ಆಧುನಿಕ ತಂತ್ರಜ್ಞಾನದ ವೇಗವಾಗಿ ಬದಲಾಗುತ್ತಿರುವ ಈ ಯುಗದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಕೆ ಎ ನಾಲೆಜ್ ಸೆಂಟರ್ ಯುವಜನರಿಗೆ ಕೌಶಲ್ಯಾಭಿವೃದ್ಧಿ, ಉದ್ಯೋಗೋನ್ಮುಖ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮರ್ಪಕ ಮಾರ್ಗದರ್ಶನ ನೀಡುವ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ಆಶಿಸಿದರು. ಕೆವಿಜಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ವಿ. ಲೀಲಾಧರ್ ಶೈಕ್ಷಣಿಕ ಕ್ಷೇತ್ರದ ವಿವಿಧ ಮಜಲುಗಳನ್ನು ಸ್ಪರ್ಶಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ಶಿಕ್ಷಣ ಹಾಗೂ ವೃತ್ತಿ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಟಿ.ಎಂ. ಶಾಹೀದ್, ಡಾ. ಕೆ.ವಿ. ಲೀಲಾಧರ್, ಹನೀಫ್ ಪುತ್ತೂರು, ಹಮೀದ್ ಕುತ್ತಮೊಟ್ಟೆ, ಅಡ್ವೊಕೇಟ್ ಅಬೂಬಕರ್ ಇವರನ್ನು ಸನ್ಮಾನಿಸಲಾಯಿತು. ಅಲ್ಲದೆ ವೈದ್ಯಕೀಯ, ಕಾನೂನು ಸೇರಿದಂತೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿ ಸೇವಾರಂಗಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸೌಮ್ಯ ಬೆಂಗಳೂರು, ಅಬ್ದುಲ್ ಮಜೀದ್ ಹಾಜಿ ಜನತಾ, ಲತೀಫ್ ಹರ್ಲಡ್ಕ, ಹಮೀದ್ ಬೀಜಕೊಚ್ಚಿ, ಇಮ್ತಿಯಾಝ್ ಕಮ್ಯುನಿಟಿ ಸೆಂಟರ್, ಉಮ್ಮತ್ ಒನ್ ಕೊಡಗು ಖಾಲಿದ್, ಬಾತಿಶಾ ಸುಣ್ಣಮೂಲೆ, ಇಕ್ಬಾಲ್ ಎಲಿಮಲೆ, ಶಾಫಿ ಕುತ್ತಮೊಟ್ಟೆ, ಸಿದ್ದೀಕ್ ಕಟ್ಟೆಕಾರ್, ಅಬ್ದುಲ್ ಹಮೀದ್ ಜನತಾ, ಮುಹಮ್ಮದ್ ಕೆ.ಎಂ.ಎಸ್, ಹಮೀದ್ ಸುಣ್ಣಮೂಲೆ, ಅಡ್ವೊಕೇಟ್ ಮೂಸ ಪೈಂಬಚ್ಚಾಲ್, ಆಶಾ ಮೇಡಂ , ಅಡ್ವೊಕೇಟ್ ರಾಬಿಯಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸಮಾಜಮುಖಿ ಚಿಂತನೆಗಳ ಸಂಗಮವಾಗಿ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಹೊಸ ಆಶಾವಾದವನ್ನು ಮೂಡಿಸಿತು.

Leave a Reply

Your email address will not be published. Required fields are marked *