ಕಡಬ, ಆಗಸ್ಟ್ 20: ಪ್ರಥಮಬಾರಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು ಜಯಭೇರಿ ಬಾರಿಸಿದೆ. ಒಟ್ಟು 13 ಸ್ಥಾನಗಳಲ್ಲಿ 8 ಸ್ಥಾನವನ್ನು ಗೆದ್ದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. 10 ಸ್ಥಾನ ಗೆಲ್ಲುವ ದೊಡ್ಡ ಆತ್ಮವಿಶ್ವಾಸ ದಲ್ಲಿ ಇದ್ದ ಬಿಜೆಪಿ 5 ಸ್ಥಾನ ಗೆದ್ದು ತೃಪ್ತಿ ಪಡಬೇಕಾಗಿದೆ.  ಮತದಾರರು ರಾಜ್ಯ ಸರಕಾರದ  ಗ್ಯಾರಂಟಿ ಯನ್ನು ಒಪ್ಪಿಕೊಂಡಿದ್ದಾರೆ.

ಚುನಾವಣಾ ಫಲಿತಾಂಶದಿಂದ ಜಿಲ್ಲೆಯ ರಾಜಕೀಯದಲ್ಲಿ ಹೊಸ ತಿರುವು ಕಂಡುಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹದ ಮುಗಿಲುಮುಟ್ಟಿದೆ.

Leave a Reply

Your email address will not be published. Required fields are marked *