Nammasullia: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಕಲ್ಲುಗುಂಡಿ ಕಡೆಪಾಲದಲ್ಲಿ ಮಿನಿ ಗೂಡ್ಸ್ ವಾಹನ ಪಲ್ಟಿಯಾದ ಘಟನೆ ವರದಿಯಾಗಿದೆ. ಕೌಡಿಚಾರ್ ಮೂಲದ ಅಶೋಕ ಹೋಲ್ ಸೇಲ್ ಚಾಟ್ ಐಟಂಸ್ ಸಪ್ಲೈ ವಾಹನ ಇಂದು ಮಧ್ಯಾಹ್ನ ಪಲ್ಟಿಯಾಗಿದೆ. ಪಾನಿ ಪೂರಿಯ ಪೂರಿ ಲೈನ್ ಸೇಲ್ ಮಾಡುವ ವಾಹನಕ್ಕೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಒಂದು ಕಾರು ಬಂದಿದೆ. ಇದಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಈ ಮಿನಿ ವಾಹನ ಬರೆಗೆ ಗುದ್ದಿ ಪಲ್ಟಿಯಾಗಿದೆ. ಘಟನೆ ಕಣ್ಣೆದುರು ನಡೆದಿದ್ದರೂ ಕಾರು ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ.
ವಾಹನದಲ್ಲಿದ್ದರು ಅಪಾಯದಿಂದ ಪಾರಗಿದ್ದಾರೆ ಎಂದು ತಿಳಿದು ಬಂದಿದೆ.
