ಸುಳ್ಯ-ನ.10: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕಲ್ಲುಮುಟ್ಲು ಅಂಗನವಾಡಿ ಕೇಂದ್ರದ ತಡೆಗೋಡೆ ಕುಸಿದಿದೆ. ಕಳೆದ ವರ್ಷ ತಡೆಗೋಡೆ ಅರ್ಧ ಕುಸಿದಿತ್ತು,ಆದರೆ ಮರು ನಿರ್ಮಾಣ ಅಥವಾ ದುರಸ್ತಿ ಕಾರ್ಯ ಮಾಡಿರಲಿಲ್ಲ. ಹಾಗಾಗಿ ಅದರ ಉಳಿದ ಸ್ವಲ್ಪ ಬಾಗ ಇಂದು ಕುಸಿದು ಬಿದ್ದಿದೆ.
ಸಣ್ಣ ಮಕ್ಕಳು ಅಂಗನವಾಡಿಯಲ್ಲಿರುದರಿಂದ ಮುಂದಿನ ಬಾರಿ ವೈಜ್ಞಾನಿಕವಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಲು ಸಂಭಂದ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಎಸ್ ಡಿ ಪಿ ಐ ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಸಿ ಎ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಲುಮುಟ್ಲು ಬ್ರಾಂಚ್ ಅಧ್ಯಕ್ಷರು ಶಮೀರ್ ಕಲ್ಲುಮುಟ್ಲು, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲು ಮುಟ್ಲು ಉಪಸ್ಥಿತರಿದ್ದರು.




