ಸುಳ್ಯ: ಕಾರುಣ್ಯ ಚಾರಿಟೇಬಲ್ ಟ್ರಸ್ಟ್ (ರಿ) ಪೈಚಾರ್ ಸುಳ್ಯ ಇದರ ವತಿಯಿಂದ, ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ‘ಕಾರುಣ್ಯ ಸೇವಾ ಪ್ರಶಸ್ತಿ’ ಪುರಸ್ಕಾರ ಸಮಾರಂಭ ಇದೇ ಬರುವ ನವೆಂಬರ್ ತಿಂಗಳಲ್ಲಿ ನಡೆಯಲಿದೆ.

ಶೈಕ್ಷಣಿಕ ಕ್ಷೇತ್ರ, ಕ್ರೀಡಾಕ್ಷೇತ್ರ, ವೈದ್ಯಕೀಯ, ಸಾಮಾಜಿಕ, ಮಾಧ್ಯಮ, ಶಿಕ್ಷಕ, ಕೃಷಿ, ಸೇವಾ ಸಂಘಟನಾ ಕ್ಷೇತ್ರ, ಕೈಗಾರಿಕೋದ್ಯಮ, ಯೂತ್ ಐಕಾನ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಉದಾತ್ತ ಸೇವೆಯನ್ನು ನೀಡಿ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಂತವರಿಗೆ ಅದ್ದೂರಿಯಾಗಿ ‘ಕಾರುಣ್ಯ ಸೇವಾ ಪ್ರಶಸ್ತಿ’ ಯನ್ನು ನೀಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ತಿಳಿಸಿದ್ದಾರೆ.



