ಸುಳ್ಯ ಅ.07: ಸುಳ್ಯದ ಮೆಸ್ಕಾಂ’ನ ಲೈನ್ ಮ್ಯಾನ್ ಒಬ್ಬರು ತಮ್ಮ ಕರ್ತವ್ಯ ನಿಷ್ಠೆ ಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿ ‘ಬೇಷ್’ ಎನಿಸಿಕೊಂಡಿದ್ದಾರೆ.
ಒಂದು ಕಡೆ ಸುಳ್ಯ ದಸರಾ ಆಚರಣೆ ಬಲು ಜೋರು, ಹಾಗೇ ದಾರಿಯುದ್ದಕ್ಕೂ ವರ್ಣರಂಜಿತ ಸ್ತಬ್ಧ ಚಿತ್ರ ಗಳ ಮೆರವಣಿಗೆ ಇಂತಹ ಸಂದರ್ಭದಲ್ಲಿ ಸುಳ್ಯದ ಮೆಸ್ಕಾಂ’ನ ಲೈನ್ ಮ್ಯಾನ್ ಹಳೆಗೇಟು ಬಳಿ ವಿದ್ಯುತ್ ಸರಬರಾಜು ಸರಿ ಇದೆ ಎಂದು ಪರೀಕ್ಷಿಸದ್ದು, ಬಳಿಕ ಸಣ್ಣ ಎಡವಟ್ಟು ಕಂಡಾಗ, ಸಮಯ ಸಂಧರ್ಭ ನೋಡದೆ ವಿದ್ಯುತ್ ಕಂಬಕ್ಕೆ ಏರಿ ವಿದ್ಯುತ್ ಸರಬರಾಜನ್ನು ಸರಿ ಪಡಿಸಿದ್ದಾರೆ. ಇವರ ವೃತ್ತಿ ಮೇಲಿನ ಕರ್ತವ್ಯ ನಿಷ್ಠೆಯನ್ನು ಕಂಡು ಸಾರ್ವಜನಿಕರು ಪ್ರಶಂಸಿದ್ದಾರೆ.



