ಕೊಯನಾಡು ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮದ ಲೋಗೋ ಬಿಡುಗಡೆ ಸಮಾರಂಭ ಆಗಸ್ಟ್ 22 ರಂದು ಜುಮಾ ನಮಾಝ್ ಬಳಿಕ ಮದ್ರಸ ವಠಾರದಲ್ಲಿ ಜರುಗಿತು.
ಕಾರ್ಯಕ್ರಮದ ಲೋಗೋಗೆ “ರೂಹೀ ಫಿದಾಕ” ಎಂದು ಹೆಸರು ಇಡಲಾಗಿದ್ದು, ಲೋಗೋವನ್ನು ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್. ಮೊಯಿದಿನ್ ಕುಂಞಿ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ಖತೀಬ್ ಅಲ್ ಹಾಜ್ ಸಿದ್ದೀಕ್ ಝುಹ್ರಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಎಸ್.ಪಿ, ಜಮಾಅತ್ ಮಾಜಿ ಅಧ್ಯಕ್ಷರಾದ ಹಾಜಿ ಅಲವಿ ಕುಟ್ಟಿ, ಅಬ್ದುಲ್ ರಝಾಕ್ ಎಸ್.ಎ., ಸರ್ವ ಜಮಾಅತ್ ಸದಸ್ಯರು ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.