ಸುಳ್ಯ: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಆಯುಧ ಪೂಜೆಯು ಸಂಭ್ರಮದಿಂದ ನಡೆಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಯೋಗಾಲಯಗಳನ್ನು ತಳಿರು, ತೋರಣಗಳಿಂದ ಅಲಂಕರಿಸಿ, ಪೂಜೆಯ ನಂತರ ಉಪಹಾರ ವಿತರಿಸಿ ಸಂಭ್ರಮಿಸಿದರು. ಎ.ಓ.ಎಲ್.ಇ ಕಮಿಟಿ “ಬಿ”ಯ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ ವಿ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ನಡೆದ ಮಹಾಪೂಜೆಯಲ್ಲಿ ಎ.ಓ.ಎಲ್.ಇ ಕಮಿಟಿ” ಬಿ” ಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್ ಹಾಗೂ ನಿರ್ದೇಶಕಿ ಡಾ. ಅಭಿಜ್ಞಾ ಕೆ.ಆರ್ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ, ಉಪ ಪ್ರಾಂಶುಪಾಲ ಹರೀಶ್ ಕುಮಾರ್ ಪಿ ಎಲ್ಲಾ ವಿಭಾಗ ಮುಖ್ಯಸ್ಥರುಗಳು, ಬೋಧಕ,ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.


