ಈದ್ ಮಿಲಾದ್ ಪ್ರಯುಕ್ತ ಕೇರಳದ ಕಲ್ಲಿಕೋಟೆಯ ಮರ್ಕಜ್ ಕಾರಂದೂರಿನಲ್ಲಿ ಕಲಿಯುತ್ತಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕೂಟವಾದ ಕೆ ಎಸ್ ಒ ಸಂಘಟನೆಯ ವತಿಯಿಂದ ಸುಳ್ಯ ಪಟ್ಟಣದಲ್ಲಿ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು. ಇದು ಮಿಲಾದ್ ಕ್ಯಾಂಪೇನ್ “ಶಫೀಯುಲ್ ಉಮಮ್ ೩.೦” ಭಾಗವಾಗಿ ಆಯೋಜಿಸಲಾಗಿದ್ದ ಅತ್ತವದ್ದುದ್ – ಪ್ರೀತಿ ಹಂಚೋಣ ಕಾರ್ಯಕ್ರಮವಾಗಿದೆ. “ಪ್ರೀತಿ ಹಂಚೋಣ” ಎಂಬ ಸಂದೇಶದೊಂದಿಗೆ ವಿವಿಧ ಸಮುದಾಯದ ಜನರು ಭಾಗವಹಿಸಿ ಈದ್ ಮಿಲಾದ್ ಹಬ್ಬದ ಸಂತೋಷವನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಎಲ್ಲರಿಗೂ ಪ್ರೀತಿ ಹಾಗೂ ಸಹೋದರತ್ವದ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದಲ್ಲಿ ಕೆ ಎಸ್ ಒ ಉಪಾಧ್ಯಕ್ಷರಾದ ಹಾಫಿಲ್ ಸಿದ್ದೀಕ್, ಸದಸ್ಯರಾದ ಮುಂಜಿರ್ , ಕರೀಂ, ರಾಶಿದ್ , ಸಈದ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಬೆಂಬಲ ನೀಡಿದರು. ಈ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುವುದು ಹಾಗೂ ಪ್ರೀತಿ ಹಂಚುವ ಉದ್ದೇಶವನ್ನು ಮುಂದುವರೆಸಲಾಗಿದೆ.

