ಮುಹಿಯದ್ದೀನ್ ಜುಮಾ ಮಸೀದಿ ಮಾರ್ಗ ಮಂಡೆಕೋಲು SYS&SKSSF ಮಂಡೆಕೋಲು ಶಾಖೆ SKSBV ಕುವ್ವತುಲ್ ಇಸ್ಲಾಂ ಮದ್ರಸ ಮಾರ್ಗ ಮಂಡೆಕೋಲು.

ಇವುಗಳ ಸಂಯುಕ್ತ ಆಶ್ರಯದಲ್ಲಿ ಭವ್ಯ ಭಾರತದ 79ನೇ ವರ್ಷದ ಸ್ವತಂತ್ರ ದಿನಾಚರಣೆಯ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವು ಎಂಜೆಎಂ ಮಾರ್ಗ ಮಂಡೆಕೋಲು ಇದರ ಸಭಾಂಗಣದಲ್ಲಿ ನಡೆಯಿತು. ಊರಿನ ಹಿರಿಯರಾದ ಜನಾಬ್ ಪೋಕರ್ ಕುಂಞಿ ಹಾಜಿ ಶಾಲೆಕ್ಕಾರ್ ರವರು ದ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬರದ ಶಮೀಮ್ ಅರ್ಶದಿಯವರು ಸಂದೇಶ ಭಾಷಣ ಮಾಡಿ ದುಹಗೆ ನೆರವೇರಿಸಿದರು. ಸ್ವತಂತ್ರ ದಿನಾಚರಣೆಯ ಅಂಗವಾಗಿ ಮದ್ರಸ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಜಮಹತ್ ಅದ್ಯಕ್ಷರಾದ ಹಮೀದ್ ಮಾವಂಜಿ ,ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಕತಾರ್ ಜಮಾಹತರು SYS&SKSSF ಕಾರ್ಯಕರ್ತರು ಮದ್ರಸ ಅದ್ಯಾಪಕರು ಮತ್ತು ಮದ್ರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಣೆ ನಡೆಯಿತು.

Leave a Reply

Your email address will not be published. Required fields are marked *