ಮುಹ್ಯದ್ದೀನ್ ಜುಮ್ಮಾ ಮಸೀದಿ ಕಲ್ಲುಗುಂಡಿ ವತಿಯಿಂದ, ಕರ್ನಾಟಕ ಸರಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಸನ್ಮಾನ ಕಾರ್ಯಕ್ರಮವು ಅ.23 ರಂದು ನಡೆಯಿತು.
ಕಾರ್ಯಕ್ರಮಕ್ಕೆ ಜಮಾಅತ್ ಅಧ್ಯಕ್ಷರಾದ ಜನಾಬ್ ಎಸ್ ಆಲಿ ಹಾಜಿಯವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಖತೀಬ್ ಉಸ್ತಾದ್ ಬಹುಮಾನ್ಯ ಅಬ್ದುಲ್ ನಾಸಿರ್ ದಾರಿಮಿರವರು ನೆರವೇರಿಸಿದರು. ಸರ್ವರಿಗೂ ಸ್ವಾಗತ ಕೋರಿ ಪ್ರಾಸ್ತವಿಕವಾಗಿ ಮಾತನಾಡಿದ ಸಮಿತಿಯ ಹಿರಿಯ ಸದಸ್ಯರಾದ ಹಾಜಿ ಅಬ್ಬಾಸ್ ಸಂಟ್ಯಾರ್ ರವರು ಶಹೀದ್ ರವರಿಗೆ ಸರ್ವ ಜಮಾಅತರ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು. ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಜನಾಬ್ ತಾಜ್ ಮಹಮ್ಮದ್, ಜನಾಬ್ K M ಅಶ್ರಫ್, ಪ್ರಧಾನ ಕಾರ್ಯದರ್ಶಿ ಜನಾಬ್ P M ಇರ್ಷಾದ್ ಬದ್ರಿಯಾ, ಕೋಶಾಧಿಕಾರಿ ಜನಾಬ್ ಅಬೂಬಕ್ಕರ್ ಸೂಪರ್, ಮುಅಝಿನ್ ಉಸ್ತಾದ್ ಸಾಜಿದ್ ಅಝ್ಹರಿ, ಹಿರಿಯರಾದ ಜನಾಬ್ ಅಬ್ದುಲ್ಲ ಹೊನೆಸ್ಟ್, ಜನಾಬ್ ಹಾಜಿ ಅಶ್ರಫ್ ಸಂಟ್ಯಾರ್,ಹಾಗೂ ಸಮಿತಿಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಮಸೀದಿ ಅಭಿವೃದ್ಧಿಗಾಗಿ ಅನುದಾನಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಅಭಿನಂದನೆ ಹಾಗೂ ಮನವಿ ಯನ್ನು ಸ್ವೀಕರಿಸಿದ ಜನಾಬ್ T M ಶಹೀದ ರವರು ಕೃತಜ್ಞತೆ ವ್ಯಕ್ತಪಡಿಸಿ, ನಿಮ್ಮ ಬೇಡಿಕೆಯನ್ನು ಪೂರೈಸುವಲ್ಲಿ ಸಂಪೂರ್ಣ ಸಹಕಾರ ನೀಡಿ ಸರಕಾರದ ಗಮನಕ್ಕೆ ತರುತ್ತೇನೆ ಎಂಬ ಭರವಸೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಿತಿಯ ಕಾರ್ಯದರ್ಶಿ ಜನಾಬ್ ಮಹಮ್ಮದ್ ಹನೀಫ್ ಚಟ್ಟೆಕಲ್ಲು ರವರು ಸರ್ವರಿಗೂ ಧನ್ಯವಾದ ಸಮರ್ಪಿಸಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಹಾಗೂ ಸಮಸ್ತ ಜಮಾಅತ್ ಭಾಂದವರು ಭಾಗವಹಿಸಿ T M ಶಹೀದ್ ರವರ ಸಾಧನೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.




