ಬೈತಡ್ಕ: 1500 ನೇ ವರ್ಷದ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಸುನ್ನಿ ಮೇನೇಜ್ಮೆಂಟ್ ಅಸೋಸಿಯೇಷನ್ (ಎಸ್.ಎಂ.ಎ) ಬೈತಡ್ಕ ರೀಜನಲ್ ವತಿಯಿಂದ ಮೊಹಲ್ಲಾ ಸಂಗಮ ಕಾರ್ಯಕ್ರಮವು ದಿನಾಂಕ 26 -08-2025 ಮಂಗಳವಾರ ರಾತ್ರಿ ಬೈತಡ್ಕ ಮದ್ರಸ ಸಭಾಂಗಣದಲ್ಲಿ SMA ಬೈತಡ್ಕ ರೀಜನಲ್ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಷಿ ಹಾಗೂ ಕಲಂ ಬಳಸಿ ಬರಹ ಮೂಲಕ ಹೃಸ್ವ ಅವಧಿಯಲ್ಲಿ ಪರಿಶುದ್ಧ ಕುರ್‌ಆನ್ ನ 30 ಕಾಂಡ ಬರೆದು ಅದ್ಭುತ ಸಾಧನೆ ಮಾಡಲು ತನ್ನ ಮಗಳಾದ ಸಜ್‌ಲ ಇಸ್ಮಾಯಿಲ್ ರಿಗೆ ಪ್ರೋತ್ಸಾಹ ನೀಡಿ ಯಶಸ್ವಿಯಾಗಿ ಮಾದರಿಯಾದ ತಂದೆ ಬಿ.ಪಿ ಇಸ್ಮಾಯಿಲ್ ಹಾಜಿ ಬೈತಡ್ಕ ರವರನ್ನು ಸನ್ಮಾನಿಸಲಾಯಿತು.
ಬೈತಡ್ಕ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ನ ಮುದರ್ರಿಸರಾದ ಬಹು| ಸಫ್ವಾನ್ ಜೌಹರಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದರ್ ಉಸ್ತಾದ್ ರಾದ ಬಹು| ಇಬ್ರಾಹಿಂ ಸಖಾಫಿ ಪುಂಡೂರು ರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ವಾಗ್ಮಿ ಅನಸ್ ಅಮಾನಿ ಪುಷ್ಪಗಿರಿ ರವರು ಮುಖ್ಯ ಭಾಷಣ ಮಾಡಿದರು.

ಕೊನೆಯಲ್ಲಿ ದಫ್ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಎಸ್.ಎಂ.ಎ ಝೋನಲ್ ಅಧ್ಯಕ್ಷರಾದ ಇಬ್ರಾಹಿಂ ಬೀಡು,ಬಹು|ಲತೀಫ್ ಮುಸ್ಲಿಯಾರ್ ಕೂರ, ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಅಧ್ಯಕ್ಷರಾದ ಪಿ.ಬಿ ಇಕ್ಬಾಲ್ ಹಾಜಿ ಬೈತಡ್ಕ,ಬೈತಡ್ಕ ರೀಜನಲ್ ಕೋಶಾಧಿಕಾರಿ ಸಾಬು ಹಾಜೆ ಕೆಲೆಂಬಿರಿ,ಬೈತಡ್ಕ ಉದಯಾಸ್ತಮಾನ ಉರೂಸ್ ಅಧ್ಯಕ್ಷರಾದ ಬಿಪಿ ಹಮೀದ್ ಹಾಜಿ ಬೈತಡ್ಕ,ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಖತೀಬರಾದ ಬಹು|ರಫೀಕ್ ನಿಝಾಮಿ ಕೊಟ್ಟಮುಡಿ,ಬದ್ರಿಯಾ ಜುಮ್ಮಾ ಮಸ್ಜಿದ್ ಪುಂಚತ್ತಾರು ಖತೀಬರಾದ ಹಾರೂನ್ ಅಹ್ಸನಿ,ಬದ್ರಿಯಾ ಜುಮ್ಮಾ ಮಸ್ಜಿದ್ ಕರಿಂಬಿಲ ಖತೀಬರಾದ ಬಹು| ಅನ್ಸಾರ್ ಫಾಳಿಲಿ,ಪಳ್ಳತ್ತಾರು ಮಸೀದಿ ಖತೀಬರಾದ ಬಹು|ಶರೀಫ್ ಸಖಾಫಿ ಪಳ್ಳತ್ತಾರು,ಎಸ್.ಎಂ.ಎ ಝೋನಲ್ ಕೋಶಾಧಿಕಾರಿ ಸಾದಿಕ್ ಸಮಹಾದಿ,ಬೈತಡ್ಕ ಜಮಾಅತ್ ಕೋಶಾಧಿಕಾರಿ ಬಿ.ಪಿ ಅಬ್ದುಲ್ ರಹ್ಮಾನ್ ಹಾಜಿ,ಬೈತಡ್ಕ ಜಮಾಅತ್ ಉಪಾಧ್ಯಕ್ಷರಾದ ಮಹಮ್ಮದ್ ಅಲೆಕ್ಕಾಡಿ, ಉದಯಾಸ್ತಮಾನ ಉರೂಸ್ ಸಮಿತಿ ಕಾರ್ಯದರ್ಶಿ ಶರೀಫ್ ಕೂಡುರಸ್ತೆ,ಪ್ರಮುಖರಾದ ಇಸ್ಮಾಯಿಲ್ ಪಡ್ಪಿನಂಗಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.