ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ ಇದರ ವತಿಯಿಂದ ಹಮ್ಮಿಕೊಳ್ಳಲಾಗುವ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಇದೇ ಬರುವ ಫೆಬ್ರವರಿ 08, ಆದಿತ್ಯವಾರ ನಡೆಯಲಿದೆ.

​ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿರುವ ಈ ಆಧ್ಯಾತ್ಮಿಕ ಸಂಗಮವು ಮಗ್ರಿಬ್ ನಮಾಜ್‌ನ ನಂತರ ಆರಂಭವಾಗಲಿದೆ.

ಕಾರ್ಯಕ್ರಮದ ಪ್ರಮುಖಾಂಶಗಳು:

  • ಸ್ವಲಾತ್ ನೇತೃತ್ವ: ಬಹು| ಉಸ್ತಾದ್ ಶಮೀರ್ ಅಹ್ಮದ್ ನಈಮಿ ಪೈಚಾರ್.
  • ಮುಖ್ಯ ಪ್ರಭಾಷಣ: ಬಹು| ಉಸ್ತಾದ್ ಉಮ್ಮರ್ ಮುಸ್ಲಿಯಾರ್ ಮರ್ದಾಳ.
  • ಪ್ರಾಸ್ತಾವಿಕ ಭಾಷಣ: ಬಹು| ಉಸ್ತಾದ್ ಅಬ್ದುರ್ರಶೀದ್ ಝೈನಿ ಪೆರಾಜೆ.

ವಿಶೇಷ ಸೂಚನೆ: ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದ್ದು, ಸರ್ವರನ್ನು ಆತ್ಮೀಯ ಸ್ವಾಗತವನ್ನು ಕೋರಲಾಗಿದೆ.

Leave a Reply

Your email address will not be published. Required fields are marked *