ಸುಳ್ಯ: ಇಲ್ಲಿನ ಶಾಂತಿನಗರ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಇದರ ಆಶ್ರಯದಲ್ಲಿ ಪವಿತ್ರವಾದ ‘ಮಾಸಿಕ ಸ್ವಲಾತ್ ಮಜ್ಲಿಸ್’ ಕಾರ್ಯಕ್ರಮವು ಇಂದು (ಜನವರಿ 11, ಆದಿತ್ಯವಾರ) ನಡೆಯಲಿದೆ.

​ಕಾರ್ಯಕ್ರಮವು ಸಂಜೆ ಮಗ್ರಿಬ್ ನಮಾಜಿನ ಬಳಿಕ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಜರುಗಲಿದೆ.

ಕಾರ್ಯಕ್ರಮದ ವಿವರಗಳು:

  • ಸ್ವಲಾತ್ ನೇತೃತ್ವ: ಬಹು| ಉಸ್ತಾದ್ ಶಮೀರ್ ಅಹ್ಮದ್ ನಈಮಿ ಪೈಚಾರ್.
  • ಮುಖ್ಯ ಪ್ರಭಾಷಣ: ಬಹು| ಉಸ್ತಾದ್ ಅಬ್ದುಲ್ ಖಾದರ್ ಸಖಾಫಿ ಅಲ್-ಕಾಮಿಲಿ ಮುದುಗುಡ.
  • ಪ್ರಾಸ್ತಾವಿಕ ಭಾಷಣ: ಬಹು| ಉಸ್ತಾದ್ ಅಬ್ದುರ್ರಶೀದ್ ಝೈನಿ ಪೆರಾಜೆ.

​ಈ ಆಧ್ಯಾತ್ಮಿಕ ಸಂಗಮದಲ್ಲಿ ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಕೊನೆಯಲ್ಲಿ ತಬರುಕ್ ವಿತರಣೆ ಇರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *