ಮೂಡಡ್ಕ ಇಲ್ಲಿನ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಇದರ ಅಧೀನಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಮುನವ್ವರ ಪದವಿ ಪೂರ್ವ ಕಾಲೇಜಿಗೆ 2026 ರ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶ ಲಭಿಸಿದೆ. 2024 – 25 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಪದವಿ ಪೂರ್ವ ಕಾಲೇಜನ್ನು ಆರಂಭಿಸಲು ಮಾನ್ಯತೆ ದೊರಕಿದ್ದು ಪ್ರಸ್ತುತ ಶೆೈಕ್ಷಣಿಕ ವರ್ಷದಲ್ಲಿ ಪ್ರಥಮ ಬ್ಯಾಚ್ ಶೇಕಡಾ ನೂರು ಫಲಿತಾಂಶ ದೊರಕಿರುವುದು ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.
ಫಾತಿಮತ್ ತಸ್ಲೀಮ 576, ಫಾತಿಮತ್ ಸಹ್ಲ 571
ಹಾಯಿಶತುಲ್ ಹಾಫಿಲ 564 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ. ಹಾಗೂ ಇದಲ್ಲದೆ ಕಾಲೇಜಿನ 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

Leave a Reply

Your email address will not be published. Required fields are marked *