More

ಕುಂಬಳೆ: ರೋಮಾಂಚನಕಾರಿ ‘ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ

ದಕ್ಷಿಣ ಭಾರತದ ನಾನಾ ರಾಜ್ಯಗಳ ಸ್ಪರ್ಧಿಗಳ ಉತ್ಸಾಹಭರಿತ ಭಾಗಿ,  ಗ್ರಾಮೀಣ ಸಂಸ್ಕೃತಿಯ ಸೊಗಡು ಸಾರಿದ ರಾಷ್ಟ್ರಮಟ್ಟದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಟಿ.ಎಂ. ಶಾಹೀದ್ ತೆಕ್ಕಿಲ್ ಹರ್ಷ ಕುಂಬಳೆ:  ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪದ ಅರಿಕಲ್ ಶಿರಿಯಾ ನದಿಯ ದಂಡೆಯಲ್ಲಿ ರಾಷ್ಟ್ರ ಮಟ್ಟದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ನ.15 ರಂದು ನಡೆಯಿತು. ಕಾಸರಗೋಡು ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್, ಭಾರತ ಸರ್ಕಾರ ಪ್ರವಾಸೋದ್ಯಮ ಇಲಾಖೆ ಇದರ ಪ್ರಾಯೋಜಕತ್ವದಲ್ಲಿ ಕೇರಳ ಸರಕಾರ, ಕಾಸರಗೋಡು ತಾಲ್ಲೂಕು […]

Read More

ಬಾಳುಗೋಡು: ಪದಕ ನೂತನ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ.

Baalugodu: ಕಾಂಗ್ರೆಸ್ ಆಡಳಿತದಲ್ಲಿ ನಿರಂತರ ಅಭಿವೃದ್ಧಿ – ಭರತ್ ಮುಂಡೋಡಿ.ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಪದಕ ಮುಳುಗು ಸೇತುವೆ ಇದ್ದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಕರ್ನಾಟಕ ಘನ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಅವರು 1.75ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಈ ಸೇತುವೆ ನಿರ್ಮಾಣಕ್ಕಾಗಿ ಬಾಳುಗೋಡು ಗ್ರಾಮ ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಯ ಮೇರೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ರಾಮಕುಂಜ ನಿರಂತರ ಪ್ರಯತ್ನ ನಡೆಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ […]

Read More

ಕಡಬ: ಗೂಡ್ಸ್ ಆಪೆ-ಕಾರು ಮಧ್ಯೆ ಢಿಕ್ಕಿ: ಓರ್ವ ಮೃತ್ಯು, ಇನ್ನೋರ್ವ ಗಂಭೀರ

Kadaba: , ನ.14: ಹಣ್ಣುಹಂಪಲು ಸಾಗಾಟದ ಗೂಡ್ಸ್ ಆಪೆ ವಾಹನ ಹಾಗೂ ಕಾರೊಂದರ ನಡುವೆ ಅಪಘಾತ ಸಂಭವಿಸಿದ ಪರಿಣಾಮ ತಮೀಮ್ ಎಂಬ ಯುವಕ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಡಬ ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಇಂದು ಬೆಳಗ್ಗೆ ಮಂಗಳೂರಿನಿಂದ ಕಡಬದ ಕಳಾರಕ್ಕೆ ಹಣ್ಣು ಹಂಪಲು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮತ್ತು ವಿರುದ್ಧ ದಿಕ್ಕಿನಿಂದ ಬಂದ ಕಾರು ನಡುವೆ ಢಿಕ್ಕಿ ಸಂಭವಿಸಿದೆ. ಇದರಿಂದ ಪಿಕಪ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. […]

Read More

ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಉದ್ಯೋಗ ಮೇಳ ಉದ್ಘಾಟನೆ: 38ಕ್ಕೂ ಅಧಿಕ ಕಂಪನಿಗಳ ಭಾಗಿ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಮಂಗಳೂರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ದ.ಕ. ಜಿಲ್ಲೆ, ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸುಳ್ಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಬೃಹತ್ ಉದ್ಯೋಗ ಮೇಳವು ನಡೆಯಿತು.ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಮಿತಿ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ. ಶಾಹೀದ್ ತೆಕ್ಕಿಲ್ ಅವರು ದೀಪ ಬೆಳಗಿ […]

Read More

ಪಾಲ್ತಾಡ್: ನವೆಂಬರ್ 15ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ

ಪಾಲ್ತಾಡ್‌ನಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಅಲ್ ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್ ಪಾಲ್ತಾಡ್ ಹಾಗೂ ರಫಾ ಫೌಂಡೇಶನ್ ಪಾಲ್ತಾಡ್ ಇವರ ಜಂಟಿ ಆಶ್ರಯದಲ್ಲಿ, ಬ್ಲಡ್ ಡೋನರ್ಸ್ ಮಂಗಳೂರು (ರಿ.) ಇದರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ಆಯೋಜನೆಗೊಂಡಿದೆ. ಬರುವ ನವೆಂಬರ್ 15, 2026ರಂದು ಪಾಲ್ತಾಡ್‌ನ ಲಿವಾಹ್ ಜುಮಾ ಮಸೀದಿಯಲ್ಲಿ ಈ ಶಿಬಿರವು ನಡೆಯಲಿದ್ದು, ಅಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಕಾರ್ಯಕ್ರಮವು ಜರುಗಲಿದೆ. ರಕ್ತದಾನದ ಮಹತ್ವವನ್ನು ಸಾರುವ ಈ ಸತ್ಕಾರ್ಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು […]

Read More

ದುಗ್ಗಲಡ್ಕ: ಕಾರು ರಿವರ್ಸ್ ತೆಗೆಯುವಾಗ ಮಹಿಳೆ ಮೇಲೆ ಹರಿದು ಸಾವು

ಸುಳ್ಯ ದುಗಲಡ್ಕ ಮನೆಯೊಂದರಲ್ಲಿ ನಿಲ್ಲಿಸಿದ್ದ ಕಾರನ್ನು  ರಿವರ್ಸ್ ತೆಗೆಯುತ್ತಿರುವಾಗ ಕಾರಿನಡಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನ.11 ರಂದು ಸಂಭವಿಸಿದೆ. ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಹಿಂದಕ್ಕೆ ತೆಗೆಯುತ್ತಿರುವಾಗ ಹಿಂದೆ ನಿಂತಿದ್ದ ಮಹಿಳೆಗೆ ಕಾರು ಗುದ್ದಿ ಎಳೆದುಕೊಂಡ ಹೋಗಿದೆ ಎನ್ನಲಾಗಿದೆ. ಇದರಿಂದ ತೀವ್ರ ಗಾಯಗೊಂಡ ಮಹಿಳೆ ಕಮರು ಎಂಬವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಪೋಲಿಸರು ಘಟನಾಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ದುಬೈನಲ್ಲಿ ಅರಂತೋಡು ಎನ್‌ಆರ್‌ಐ ಫೋರಮ್ ವತಿಯಿಂದ ‘ಸ್ನೇಹ ಸಮ್ಮಿಲನ-2026’; ಅರಂತೋಡು ಎನ್‌ಆರ್‌ಐ ಫೋರಮ್‌ನ ಸಮಾಜಮುಖಿ ಕಾರ್ಯಗಳು ಎಂದಿಗೂ ಶ್ಲಾಘನೀಯ: ಟಿ.ಎಂ. ಶಾಹಿದ್ ತೆಕ್ಕಿಲ್

ದುಬೈ: ದುಬೈನ ಅಲ್ ಖುಸೈಸ್‌ನಲ್ಲಿ ಎನ್‌ಆರ್‌ಐ ಫೋರಮ್ ಅರಂತೋಡು ಯುಎಇ ವತಿಯಿಂದ ನವೆಂಬರ್ 8 ರಂದು ‘ಸ್ನೇಹ ಸಮ್ಮಿಲನ-2026’ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಅರಂತೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನಿವಾಸಿ ಭಾರತೀಯರಾದ ಸುಮಾರು 50ಕ್ಕೂ ಅಧಿಕ ಸಹೋದರರು ಈ ಸಮ್ಮಿಲನದಲ್ಲಿ ಪಾಲ್ಗೊಂಡು ಪರಸ್ಪರ ಸಂಭ್ರಮ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರನ್ನು […]

Read More

ಸುಳ್ಯ: ಪೈಚಾರ್ ಬಳಿ ಪೆಟ್ರೋಲ್ ಬಂಕ್‌ಗೆ ತಿರುಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಬೈಕ್; ಸವಾರನಿಗೆ ಸಣ್ಣಪುಟ್ಟ ಗಾಯ

ಪೈಚಾರ್‌ನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರೊಂದು ಪೆಟ್ರೋಲ್ ಬಂಕ್‌ಗೆ ಬಲ ತಿರುವು ಪಡೆದ ಸಂದರ್ಭದಲ್ಲಿ, ಹಿಂಬದಿಯಿಂದ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಪೈಚಾರ್ ಕಡೆಯಿಂದ ಸುಳ್ಯದ ಮಾರ್ಗವಾಗಿ ಚಲಿಸುತ್ತಿದ್ದ ಕಾರಿನ ಚಾಲಕ, ರಸ್ತೆಯ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ಹೋಗಲು ತಿರುವು ಪಡೆದಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ಹಿಂದೆ ಬರುತ್ತಿದ್ದ ಬೈಕ್ ಸವಾರನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ, ನೇರವಾಗಿ ಕಾರಿಗೆ ಬೈಕ್ ಗುದ್ದಿದೆ. ಈ ಅಪಘಾತದಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ […]

Read More

ಅರಂತೋಡು ಅನ್ವಾರುಲ್ ಹುಧಾ ಮೆಡಿಕಲ್ ರಿಲೀಫ್ ಫಂಡ್ ನಿಂದ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ನೆರವು

ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅರಂತೋಡು ಇದರ ಮೆಡಿಕಲ್ ರಿಲೀಪ್ ಫಂಡ್ ನಿಂದ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಜುದ್ಧೀನ್ ಅರಂತೋಡುರವರ ಪತ್ನಿ ಅಸ್ಮಾಳ ಚಿಕಿತ್ಸೆಗೆ ರೂ. 5000/- ವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕಾರ್ಯದರ್ಶಿ ಪಸೀಲು, ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಅಬ್ದುಲ್ ಖಾದರ್ ಪಠೇಲ್, ಅಬ್ದುಲ್ಲ ಮಾಸ್ಟರ್, […]

Read More

ಸುಳ್ಯ ಎ.ಪಿ.ಎಂ.ಸಿ. ಮಾಜಿ ನಿರ್ದೇಶಕ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ ನಿಧನ

ಸುಳ್ಯ: ಸುಳ್ಯ ಎ.ಪಿ.ಎಂ.ಸಿ.ಯ ಮಾಜಿ ನಿರ್ದೇಶಕರು ಹಾಗೂ ಐವರ್ನಾಡು ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ, ಐವರ್ನಾಡು ಗ್ರಾಮದ ನೆಕ್ರಿಪ್ಪಾಡಿ ಕುಟುಂಬದ ಹಿರಿಯರಾದ ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ (88 ವರ್ಷ) ಅವರು ವಯೋಸಹಜ ಅಸೌಖ್ಯದಿಂದ ನವೆಂಬರ್ 10ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಸಾರ್ವಜನಿಕ ಹಾಗೂ ಸಾಮಾಜಿಕ ಸೇವೆ: ಕೃಷ್ಣಪ್ಪ ಗೌಡರು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಪಾಲೆಪ್ಪಾಡಿ ಇವೆರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸಮಾಜಕ್ಕೆ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದರು. ಅಲ್ಲದೆ, […]

Read More