ಸಮುದಾಯಕ್ಕೆ ಶಿಕ್ಷಣ ಕೇಂದ್ರಗಳ ಕೊಡುಗೆ ಅಪಾರ-ಝಕರಿಯಾ ಜೋಕಟ್ಟೆ
ಉಪ್ಪಿನಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಝಕರಿಯಾ ಜೋಕಟ್ಟೆ ಇಂದು ಮೂಡಡ್ಕ ವಿದ್ಯಾಸಂಸ್ಥೆಗೆ ಭೇಟಿ ನೀಡಿದರು ಈ ವೇಳೆ ಅಲ್ ಮದೀನತುಲ್ ಮುನವ್ವರ ಎಜ್ಯುಕೆಶನಲ್ ಸೆಂಟರ್ ಮೂಡಡ್ಕ ಇದರ ಸಾರಥಿಗಳು ಪ್ರೌಢ ಸ್ವಾಗತ ನೀಡಿದರು.
ಸಂಸ್ಥೆಯ ವಠಾರಕ್ಕೆ ಶಾಲಾ ವಿದ್ಯಾರ್ಥಿಗಳ ಗೌರವ ಸ್ವೀಕರಿಸಿ ವಿಶೇಷ ಆತಿಥ್ಯ ಮೂಲಕ ಸಂಸ್ಥೆಯನ್ನು ವೀಕ್ಷಿಸಿದರು. ಸಮುದಾಯಕ್ಕೆ ಮತ್ತು ಸಮಾಜಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಮೂಡಡ್ಕ ಶಿಕ್ಷಣಾ ಕೇಂದ್ರದ ಬಗ್ಗೆ ಕೊಂಡಾಡಿದರು ಮತ್ತು ಸಂಸ್ಥೆಯ ಪ್ರಗತಿಗೆ ಆರ್ಥಿಕ ಹಸ್ತ ಚಾಚುವುದಾಗಿ ಭರವಸೆ ನೀಡಿದರು. ಇದೇ ವೇಳೆ ಸಂಸ್ಥೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಝಕರಿಯಾ ಜೋಕಟ್ಟೆ ರವರನ್ನು ಸಂಸ್ಥೆಯ ಸಾರಥಿಗಳು ಅಭಿನಂದನಾ ಫಲಕ ನೀಡಿ ಸನ್ಮಾನಿಸಿದರು.
ಸಂಸ್ಥೆಯ ಅಧ್ಯಕ್ಷ ಸೆಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಗಳ್ ಉಜಿರೆ, ಜನರಲ್ ಮೆನೇಜರ್ ಅಶ್ರಫ್ ಸಖಾಫಿ, ನಝಿರ್ ಮಠ, ಜೋಗಿಬೆಟ್ಟು ಮಸೀದಿ ಅಧ್ಯಕ್ಷ ಪುತ್ತಾಕ, ರಶೀದ್ ವಿಟ್ಲ ಹಾಗು ಸಂಸ್ಥೆಯ ಅಧ್ಯಾಪಕರು ಮತ್ತು ದರ್ಗಾ ಸಮಿತಿಯ ನಾಯಕರು ಮತ್ತಿತ್ತರು ಉಪಸ್ಥಿತರಿದ್ದರು. ಸಮದ್ ಮಾಸ್ಟರ್ ಸ್ವಾಗತಿಸಿ ಶೆಕಿರ್ ಮಾಸ್ಟರ್ ವಂದಿಸಿದರು.
