ಕುಂಬರ್ಚೋಡು: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರ 1500 ನೇ ಜನ್ಮದಿನದ ಅಂಗವಾಗಿ ಮುಹಿಯದ್ದೀನ್ ಜುಮಾ ಮಸೀದಿ ಕುಂಬರ್ಚೋಡು, ಅಲ್ ಇರ್ಷಾದಿಯಾ ಜಮಾಅತ್ ಕಮಿಟಿ, ಎಂಜೆಎಂ ಯೂತ್ ವಿಂಗ್ ಬೊಳುಬೈಲು ಇದರ ಆಶ್ರಯದಲ್ಲಿ ‘ಮುನಾಫಸ ಮೀಲಾದ್ ಫೆಸ್ಟ್ 2K25’ ಕಾರ್ಯಕ್ರಮವು ಸೆ.28 ಆದಿತ್ಯವಾರ ದಂದು ನಡೆಯಿತು.

ಅಪರಾಹ್ನ ಲುಹ್ರ್ ನಮಾಝಿನ ನಂತರ ಮಕ್ಕಳ ಕಲಾ ಕಾರ್ಯಕ್ರಮಕ್ಕೆ ದುಃಆ ಮೂಲಕ ಬಹು| ಇಖ್ಬಾಲ್ ಇರ್ಫಾನಿ ಖತೀಬರು ಎಂ.ಜೆ.ಎಂ ಕುಂಬರ್ಚೋಡು ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ। ಅಬ್ದುಲ್ ಕರೀಂ ಬಿ.ಎಂ. ಉಪಾಧ್ಯಕ್ಷರು, MJM ಕುಂಬರ್ಚೋಡು ವಹಿಸಿದ್ದರು. ವೇದಿಕೆಯಲ್ಲಿ ಬಹು। ರವೂಫ್ ಅಝ್ಹರಿ, ಮುಅಲ್ಲಿಂ MJM ಕುಂಬರ್ಚೋಡು, ಬಹು। ಸಿದ್ದೀಕ್ ಹುದವಿ, ಉಪನ್ಯಾಸಕರು ನೂರುಲ್ ಹುದಾ ಮಾಡನ್ನೂರ್, ಬಹು। ಸಿರಾಜ್ ಇರ್ಫಾನಿ ಅಲ್-ಮಖ್ ದೂಮಿ, ಖತೀಬರು, ಸುಣ್ಣಮೂಲೆ, ಅಬ್ದುಲ್ ಖಾದರ್ ಅಕ್ಕರೆ, ಪ್ರಕಾರ್ಯದರ್ಶಿ, MJM ಕುಂಬರ್ಚೋಡು, ಅಬ್ಬಾಸ್ ಅಕ್ಕರೆ, ಕೋಶಾಧಿಕಾರಿ, MJM ಕುಂಬರ್ಚೋಡು, ಅಶ್ರಫ್ ಪ್ರಗತಿ, ಕರೀಂ ಡಿ..ಎಮ್, ಕರೀಂ, ಫುಡ್ ಪಾಯಿಂಟ್, ಸಿರಾಜ್, ಸುನೈಲ್, ರುಫೈದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಗ್ರಿಬ್ ನಮಾಜಿನ ನಂತರ ಸಮಾರೋಪ ಸಮಾರಂಭ ನಡೆಯಿತು. ಸ್ವಾಗತ & ಪ್ರಾಸ್ತಾವಿಕ ಭಾಷಣವನ್ನು ಬಹು। ಇಖ್ಬಾಲ್ ಇರ್ಫಾನಿ ಕಿರು ಭಾಷಣ ನೀಡಿದರು. ಮುಖ್ಯ ಪ್ರಭಾಷಣಗಾರರಾಗಿ ಬಹು ಮುಹಮ್ಮದ್ ಸಫ್ವಾನ್ ಇರ್ಫಾನಿ ಮುಂಡೋಳೆ ಮಾತಾನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ| ಮುಹಮ್ಮದ್ ಅಲಿ ಪೆರಾಜೆ ವಹಿಸಿದ್ದರು (ಅಧ್ಯಕ್ಷರು, MJM ಕುಂಬರ್ಚೋಡು), ಉದ್ಘಾಟನೆಯನ್ನು ಬಹು। ಶಮೀರ್ ಅಹಮ್ಮದ್ ನಈಮಿ, ಖತೀಬರು ಬಿಜೆಎಂ ಪೈಚಾರು ನೆರವೇರಿಸಿದರು. ವೇದಿಕೆಯಲ್ಲಿ ಎಸ್. ಅಬ್ದುಲ್ಲ ಹಾಜಿ ಕಟ್ಟೆಕ್ಕಾರ್, ಅಧ್ಯಕ್ಷರು A.M.A ಗಾಂಧಿನಗರ ಸುಳ್ಯ, ಹಾಜಿ ಇಬ್ರಾಹಿಂ ಪಿ. ಅಧ್ಯಕ್ಷರು ಬಿ.ಜೆ.ಎಂ ಪೈಚಾರು, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅಧ್ಯಕ್ಷರು ಸಂಯುಕ್ತ ಜಮಾಅತ್ ಸುಳ್ಯ ತಾಲೂಕು, ಯು.ಹೆಚ್. ಅಬೂಬಕ್ಕರ್ ಹಾಜಿ ಬೆಳ್ಳಾರೆ, ಅಧ್ಯಕ್ಷರು ZJM ಬೆಳ್ಳಾರೆ, ಹಮೀದ್ ಕುತ್ತಮೊಟ್ಟೆ, ಅಧ್ಯಕ್ಷರು ಗ್ಯಾರಂಟಿ ಯೋಜನೆ ಅನುಷ್ಠಾನ ಸುಳ್ಯ ತಾಲೂಕು, ಕೆ.ಎಂ. ಮುಸ್ತಫ ಹಾಜಿ ಅಧ್ಯಕ್ಷರು ಸುಳ್ಯ ನಗರ ಯೋಜನಾ ಪ್ರಾಧಿಕಾರ, ಲತೀಫ್ ಹರ್ಲಡ್ಕ, ಪ್ರಕಾರ್ಯದರ್ಶಿ ಅನ್ಸಾರಿಯ ಎಜುಕೇಶನ್ ಸೆಂಟರ್ ಸುಳ್ಯ, ಅಹಮ್ಮದ್ ಹಾಜೆ ಸವಣೂರು ಸದಸ್ಯರು ಸಲಹಾ ಸಮಿತಿ MJM ಕುಂಬರ್ಚೋಡು, ಶರೀಫ್ ಇಂಜಿನಿಯರ್ ಚೆಂಬರಿಕ ಕಾಸರಗೋಡು, ಮುಜೀಬ್ ಪೈಚಾರ್ ಸದಸ್ಯರು ಗ್ರಾಮ ಪಂಚಾಯತ್ ಜಾಲ್ಸೂರು, ಬಾತೀಷ ಸುಣ್ಣಮೂಲೆ ಡಿಗ್ನಿಟಿ ಗೋಲ್ಡ್,  ಪೈಸಲ್ ಕಟ್ಟೆಕ್ಕಾರ್ ಯುವ ಉದ್ಯಮಿ, ಅಬ್ದುಲ್ ಸತ್ತಾರ್ ಪೈಚಾರ್ ಅಧ್ಯಕ್ಷರು, ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್, ಅಬ್ದುಲ್ ಮಜೀದ್ ನಡುವಡ್ಕ ಸದಸ್ಯರು ಗ್ರಾಮ ಪಂಚಾಯತ್ ಜಾಲ್ಸೂರು, ಹನೀಫ್ ಹಾಜಿ ಮಾಜಿ ಅಧ್ಯಕ್ಷರು ಎಂ.ಜೆ.ಎಂ ಕುಂಬರ್ಚೋಡು ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ಅಕ್ಕರೆ, ಪ್ರಕಾರ್ಯದರ್ಶಿ MJM ಕುಂಬರ್ಚೋಡು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಧನ್ಯವಾದ ಇತ್ತರು.

Leave a Reply

Your email address will not be published. Required fields are marked *