ನೆಹರು ಮೆಮೋರಿಯಲ್ ಕಾಲೇಜು ಪ್ರತಿಭಾ ದಿನಾಚರಣೆಯ ಸಾಂಸ್ಕೃತಿಕ ಸ್ಪರ್ಧೆ ಪ್ರತಿಭಾ 2k25 ಅದ್ದೂರಿಯಾಗಿ ಕೆ.ವಿ.ಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ಸೆಪ್ಟೆಂಬರ್ 09ನೇ ಮಂಗಳವಾರದಂದು ನೆರವೇರಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಮಮತಾ ಕೆ, ಸಾಂಸ್ಕೃತಿಕ ಸಂಘದ ಸಂಚಾಲಕ ವಿಷ್ಣುಪ್ರಶಾಂತ್, ಹರಿಪ್ರಸಾದ್ ಮತ್ತು ಸದಸ್ಯರು ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕ ಹರಿಪ್ರಸಾದ್ ಅತ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಳೆಯ ಚಲನಚಿತ್ರ, ಜಾನಪದ ನೃತ್ಯ, ಯಕ್ಷಗಾನ ಹೀಗೆ ಹಲವು ಸಾಂಸ್ಕೃತಿಕ ವೈವಿಧ್ಯಕ್ಕೆ ವೇದಿಕೆ ಸಾಕ್ಷಿಯಾಯಿತು.
ಅಂತಿಮವಾಗಿ ಕು.ಚಲನಾ ತಂಡದವರು ಸಾಂಸ್ಕೃತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಹರ್ಷಿತ್ ತಂಡದವರು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭ ಎಲ್ಲಾ ಭೋದಕ ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
