ಸುಳ್ಯದ ಯುವ ಪ್ರತಿಭಾನ್ವಿತ ಕ್ರೀಡಾಪಟು ನಿಹಾಲ್ ಕಮಾಲ್ ಅಜ್ಜಾವರ ಅವರನ್ನು ಅಕ್ಟೋಬರ್ 22 ರಿಂದ 31 ರವರೆಗೆ ಬಹ್ರೇನ್‌ನಲ್ಲಿ ನಡೆಯಲಿರುವ 3ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಲು ಭಾರತೀಯ ಅಥ್ಲೆಟಿಕ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

12 ದಿನಗಳ ಒಲಿಂಪಿಕ್ ಮಾದರಿ ಕ್ರೀಡಾಕೂಟದಲ್ಲಿ, 45 ಏಷ್ಯನ್ ದೇಶಗಳಿಂದ 8000 ಯುವ ಕ್ರೀಡಾಪಟುಗಳು ವೈವಿಧ್ಯಮಯ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ದೆಹಲಿ,, 100 ಮೀ ಓಟ ಮತ್ತು 1000 ಮೀ ಮೆಡ್ಲೆ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಲು ನಿಹಾಲ್ ಕಮಾಲ್ ರವರನ್ನು  ಆಯ್ಕೆ ಮಾಡಿದೆ.

ಪ್ರಸ್ತುತ. ಒಡಿಶಾದ, ಭುವನೇಶ್ವರದಲ್ಲಿ 40 ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ ನಂತರ ನಿಹಾಲ್ ದೆಹಲಿಯಲ್ಲಿ ಭಾರತೀಯ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಬೆಂಗಳೂರು ಕ್ಯಾಂಪಸ್‌ನಲ್ಲಿ ತರಬೇತಿ ಪಡೆದಿದ್ದಾರೆ. ಈ ಬಾರಿಯ ಏಷ್ಯನ್ ಯೂತ್ ಗೇಮ್ಸ್‌ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ನಿಹಾಲ್ ಕಮಾಲ್.

ಕುವೈತ್‌ನ ದೆಹಲಿ ಪಬ್ಲಿಕ್ ಶಾಲೆಯ 12 ನೇ ತರಗತಿಯ ವಿದ್ಯಾರ್ಥಿ ನಿಹಾಲ್, ಭಾರತ ಮತ್ತು ಕುವೈತ್‌ನಲ್ಲಿ ಶಾಲಾ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪ್ರತಿಭೆಯನ್ನು ತೋರಿಸಿದ್ದಾರೆ.

ಕುವೈತ್‌ನ ಮೆಕಾನ್ ಕಂಪನಿಯ ಮಾಲಿಕರು ಅಜ್ಜಾವರದ ಮೊಹಮ್ಮದ್ ಕಮಾಲ್ ಮತ್ತು ಕುವೈತ್ ತೈಲ ಕಂಪನಿಯ (Kuwait Oil Company), ಬಂಡವಾಳ ಕಾರ್ಯಕ್ರಮದ ಆಡಳಿತ ಸಲಹಾಕಾರ (CPA Consultant ) ರಹೀನಾ ಕಮಾಲ್ ಅವರ ಮಗ ನಿಹಾಲ್ ಅವರ ಅಥ್ಲೆಟಿಕ್ಸ್‌ನಲ್ಲಿ ಗಮನಾರ್ಹ ಪ್ರತಿಭೆ ಮತ್ತು ಸಮರ್ಪಣೆ ಅವರಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಷ್ಠಿತ ಅವಕಾಶವನ್ನು ತಂದುಕೊಟ್ಟಿದೆ.

Leave a Reply

Your email address will not be published. Required fields are marked *