ನಿಂತಿಕಲ್ಲು: ಇಲ್ಲಿನ ಕಲ್ಲೇರಿ ಬಸ್ ನಿಲ್ದಾಣ ಪಕ್ಕದಲ್ಲೇ, ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತೆ, ಬ್ರಹತ್ ಆಕಾರದ ಮರವೊಂದು ಬಸ್ ನಿಲ್ದಾಣ ಮೇಲೆ ವಾಲಿಕೊಂಡು ನಿಂತಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಈ ಮರ ಬೀಳುವ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದು, ಪ್ರಯೋಜನವಿಲ್ಲ ಎಂದಿದ್ದಾರೆ. ಅದೇ ರೀತಿ ಇಲ್ಲಿ ಶಾಲೆ ಮಕ್ಕಳು, ಸಾರ್ವಜನಿಕರು ಬಸ್’ಗಾಗಿ ಈ ನಿಲ್ದಾಣವನ್ನು ಆಶ್ರಹಿಸುತ್ತಾರೆ ಹಾಗೂ ಪ್ರಯಾಣಿಕರು ಕೂಡ ಜೀವವನ್ನು ಕೈಯಲ್ಲಿ ಹಿಡಿದು ಭಯದಲ್ಲಿ ನಿಲ್ಲುವಂತಾಗಿದೆ‌ ಆದುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಮರ ತೆರವು ಮಾಡಬೇಕಾಗಿ ಗ್ರಾಮಸ್ಥರು ವಿನಂತಿಸಿದ್ದಾರೆ

Leave a Reply

Your email address will not be published. Required fields are marked *