ನವೆಂಬರ್ 17; ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ವ್ಯವಹಾರ ಅಧ್ಯಯನ ಆಡಳಿತ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಒಂದು ದಿನದ ನವೋದ್ಯಮ ಕೌಶಲ್ಯ ತರಬೇತಿ ಕಾರ್ಯಗಾರವನ್ನು ದಿನಾಂಕ 17.11.2025ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಜಗದೀಶ್ ರಾಮ ವ್ಯವಸ್ಥಾಪಕ ನಿರ್ದೇಶಕರು ಆಟೋಮೇಶನ್ ಕ್ಲವಡ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಮಂಗಳೂರು, ಇವರು ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ಮನೋಭಾವ ಬೆಳೆಸುವುದು ಮತ್ತು ಉದ್ಯಮಿ ಮನಸ್ಥಿತಿಯನ್ನು ಕರಗತ ಮಾಡಿಕೊಳ್ಳುವುದು ಎಂಬ ವಿಷಯದ ಮೇಲೆ ಎರಡು ಅವಿಧಿಗಳಲ್ಲಿ ತರಬೇತಿ ನೀಡಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ, ಪ್ರಾಂಶುಪಾಲರು, ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ವಹಿಸಿದ್ದರು. ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅನಂತ ಲಕ್ಷ್ಮಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು. ತೃತೀಯ ಬಿಬಿಎ ವಿದ್ಯಾರ್ಥಿ ನಿಹಾ ಶೇಕ್ ಸ್ವಾಗತವನ್ನು ಮಾಡಿ, ತೃತೀಯ ಬಿಬಿಎ ವಿದ್ಯಾರ್ಥಿನಿ ಪಲ್ಲವಿ ವಂದನಾರ್ಪಣೆ ಮಾಡಿದರು. ಕು. ಸ್ಪಂದನ ಮತ್ತು ಕು. ತನುಶ್ರೀ ಅವರು ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು. ಅಖಿಲೇಶ್ ಬಿಬಿಎ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.




