ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕ ನಿವಾಸಿಗಳು ವಿದ್ಯುತ್ ಸಮಸ್ಯೆಯಿಂದ ಕಳೆದ ಮೂರು ದಿವಸದಿಂದ ಕತ್ತಲಲ್ಲಿ ದಿನಗಳೆಯುತ್ತಿದ್ದಾರೆ. ವಿದ್ಯುತ್ ಲೈನ್ ಗೆ ಗೆಲ್ಲು ಬಿದ್ದು 3 ದಿವಸವಾದರೂ ಅದನ್ನು ನೋಡಲು ಕೂಡ ಪವರ್ ಮ್ಯಾನ್ ಬಾರದೆ ಅವಸ್ಥೆ ಮೈತಡ್ಕದ ಜನರು ಆಕ್ರೋಶಗೊಂಡಿದ್ದಾರೆ.

ಜನಪ್ರತಿನಿದಿನಗಳು ಹೇಗೂ ಕ್ಯಾರೇ ಮಾಡುತ್ತಿಲ್ಲ..! ಪಂಚಾಯತ್ ಅಧಿಕಾರಿಗಳು ಇದನ್ನು ಕಂಡು ಕುರುಡರಂತೆ ನಟಿಸುತ್ತಿದ್ದಾರೆ. ನೀರಿಲ್ಲದೆ ವೃದ್ದರು ಮಕ್ಕಳು ಪರದಾಡುತ್ತಿದ್ದಾರೆ. ಲೈನ್ ಮ್ಯಾನ್ ಮತ್ತು ಜೆ. ಈ ಅವರ ಫೋನ್ ಸ್ವಿಚ್ ಆಪ್ ಆಗಿದೆ ಆದಷ್ಟು ಬೇಗ ಬಂದು ಲೈನ್ ಗೆ ಬಿದ್ದ ಮರವನ್ನು ತೆರವುಗೊಳಿಸಿ ನಮಗೆ ಬೆಳಕಿನ ಬಾಗ್ಯ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಇಲ್ಲಿನ ಗ್ರಾಮಸ್ಥರು ವಿನಂತಿಸುತ್ತಿದ್ದಾರೆ.

Leave a Reply

Your email address will not be published. Required fields are marked *