ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್ (ರಿ.)
ವತಿಯಿಂದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೇವಾ ಸಂಗಮದ ಸಲಹಾ ಸಮಿತಿ ಸದಸ್ಯರಾದ ಡಾ| ಅನುರಾಧ ಕುರುಂಜಿ ಯವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಸೇವಾಸಂಗಮದ ಗೌರವ ಸಲಹೆಗಾರಾದ ಚಂದ್ರಶೇಖರ ಸಿ ಬಿಳಿನಲೆ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಅಥಿತಿಗಳಾಗಿ ಗೌರವ ಸಲಹೆಗಾರಾದ ಪಾಲಚಂದ್ರ ವೈ.ವಿ ಅಂಗನವಾಡಿ ಶಿಕ್ಷಕಿ ಚಂದ್ರಾವತಿ, ಅಂಗನವಾಡಿ ಸಹಾಯಕಿ ಸುಲೋಚನ, ಚೇತನ್ ಸಿ, ಕೆ.ವಿ.ಜಿ ಪಾಲಿಟೆಕ್ನಿಕ್ ಸ್ವಯಂಸೇವಕರು ಉಪಸ್ಥಿತರಿದ್ದರು. ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಂಘದ ಖಜಾಂಚಿ ಹೇಮಾನಾಥ್ ಅವರು ವಂದಿಸಿದರು. ಅಂಗನವಾಡಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.