ಒಡಭೈ (ಆ.28): ಇಲ್ಲಿನ‌ ಗುಂಡ್ಯಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಟ್ಝ್ ಕಾರು ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದೆ.

ಕಾರು‌ ಚಾಲಕ ಚಹ ಕುಡಿಯಲು ರಸ್ತೆ ಬದಿಯಲ್ಲಿ ತನ್ನ ಕಾರನ್ನು ನಿಲ್ಲಿಸಿ ತೆರಳಿದ್ದರು, ಈ ಸಮಯದಲ್ಲಿ ಪೈಚಾರ್ ಕಡೆಯಿಂದ ಸುಳ್ಯ ಕಡೆ ತೆರಳುತ್ತಿದ್ದ ಪಿಕಪ್’ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಜಖಂ ಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *