ಮೈಸೂರು: ಇಲ್ಲಿನ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (NIE) ಕಾಲೇಜಿನ ಮಾಹಿತಿ ವಿಜ್ಞಾನ (Information Science) ವಿಭಾಗದಲ್ಲಿ ಬೆಳ್ಳಾರೆಯ ಯುವ ಪ್ರತಿಭೆ ಒಲನ್ ಡೇಲ್ ಪಿಂಟೋ ಅವರು 5ನೇ ರ‍್ಯಾಂಕ್ ಜೊತೆಗೆ ಚಿನ್ನದ ಪದಕವನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.
ಇವರು ಬೆಳ್ಳಾರೆಯ ಓವಿನ್ ಜಿ.ಎಲ್. ಪಿಂಟೋ ಹಾಗೂ ಸಂಪಾಜೆ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ) ಆಗಿರುವ ಸರಿತಾ ಓಲ್ಲಾ ಡಿಸೋಜಾ ದಂಪತಿಯ ಪುತ್ರ.
ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಒಲನ್ ಡೇಲ್ ಪಿಂಟೋ, ಪ್ರಸ್ತುತ ಬೆಂಗಳೂರಿನ ಟಾಟಾ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರ ಈ ಶೈಕ್ಷಣಿಕ ಸಾಧನೆಗೆ ಪೋಷಕರು, ಕುಟುಂಬಸ್ಥರು ಹಾಗೂ ಊರವರು ಅಭಿನಂದನೆ ಸಲ್ಲಿಸಿದ್ದಾರೆ.
