ಫ್ರೆಂಡ್ಸ್ ಫಾರೆವರ್ ಶಾಂತಿನಗರ ಇದರ ಆಶ್ರಯದಲ್ಲಿ, ಶಿಹಾಬ್ ರವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯರ ಓಲ್ಡ್ ಈಸ್ ಗೋಲ್ಡ್ ಎಂಟನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟದ ಹರಾಜು ಪ್ರಕ್ರಿಯೆಯು ಡಿ.15 ಅರಂಬೂರಿನಲ್ಲಿರುವ ರಸಪಾಕ ಹಾಲ್ ನಲ್ಲಿ ನಡೆಯಿತು.
ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿದ್ದು ಅತ್ಯಂತ ರೋಮಾಂಚನಕಾರಿ ಪಂದ್ಯಾಟವಾಗಲಿವೆ. ಮುಂಬರುವ ಜ.4 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದಲ್ಲಿ ಈ ಪಂದ್ಯಾಕೂಟ ನಡೆಯಲಿದೆ. ಈ ಸಂಧರ್ಭದಲ್ಲಿ ತಂಡದ ಮಾಲಕರಾದ ನಝೀರ್ ಶಾಂತಿನಗರ, ಹನೀಫ್ ಆಲ್ಫಾ, ರಿಫಾಯಿ, ಅಝೀಝ್ ಹಾಗೂ ಅನೇಕ ಆಟಗಾರರು ಉಪಸ್ಥಿತರಿದ್ದರು.
