ಶಾಂತಿನಗರ: ಫ್ರೆಂಡ್ಸ್ ಫೋರ್‌ಎವರ್ ಶಾಂತಿನಗರ ಇದರ ಆಶ್ರಯದಲ್ಲಿ ಇಲ್ಲಿನ ಶಾಂತಿನಗರ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಠಿತ ‘ಓಲ್ಡ್ ಈಸ್ ಗೋಲ್ಡ್ ಪ್ರೀಮಿಯರ್ ಲೀಗ್’ (ಸೀಸನ್-8) ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಬೂಮ್ ಬೂಮ್ ವಿಕ್ಟರ್ಸ್’ (Boom Boom Victors) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ‘ಆಲ್ಫಾ ಸ್ಟ್ರೈಕರ್ಸ್’ (Alfa Strikers) ತಂಡವು ದ್ವಿತೀಯ ಸ್ಥಾನದೊಂದಿಗೆ ರನ್ನರ್ಸ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ವೈಯಕ್ತಿಕ ಪ್ರಶಸ್ತಿ ವಿಜೇತರು:

  • ಸರಣಿ ಶ್ರೇಷ್ಠ (Man of the Series): ನಝೀರ್ ಶಾಂತಿನಗರ
  • ಫೈನಲ್ ಪಂದ್ಯ ಶ್ರೇಷ್ಠ (Man of the Match): ಶರೀಫ್
  • ಬೆಸ್ಟ್ ಬೌಲರ್: ರಜಾಕ್ ಆಲ್ಫಾ
  • ಬೆಸ್ಟ್ ಬ್ಯಾಟ್ಸ್‌ಮನ್: ಮನಾಫ್
  • ಬೆಸ್ಟ್ ಕೀಪರ್: ಬದ್ರು ಕಾವೇರಿ
  • ಬೆಸ್ಟ್ ಫೀಲ್ಡರ್: ಸಿದ್ದೀಕ್ ಜಿ.ಯು

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್ ಆರ್ತಾಜೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿನಗರ ಶಾಲಾ SDMC ಅಧ್ಯಕ್ಷರಾದ ನಝೀರ್ ಶಾಂತಿನಗರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾರ್ ಅಧ್ಯಕ್ಷರಾದ ರಿಫಾಯಿ ಎಸ್.ಎ, ಮಾಂಡೋವಿ ಸುಳ್ಯದ ಸೇವಾ ಸಲಹೆಗಾರರಾದ ದುರ್ಗಾದಾಸ್ ಕೆ, ಹಾಗೂ ಯೂನಿಯನ್ ಬ್ಯಾಂಕ್ ಸುಳ್ಯದ ಗೌತಮ್ ಟಿ.ಎಸ್ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷರಾದ ಬಶೀರ್ ಆರ್.ಬಿ ವಹಿಸಿದ್ದರು. ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾರ್ ಇದರ ಗೌರವಾಧ್ಯಕ್ಷರಾದ ಶಾಫಿ ಪ್ರಗತಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ‌ ನಾಸಿರ್ ಕೆ.ಪಿ, ಲತೀಫ್ ಟಿ.ಎ, ಪ್ರವೀಣ್ ಶಾಂತಿನಗರ  ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.

Leave a Reply

Your email address will not be published. Required fields are marked *