ಯೂಟ್ಯೂಬರ್ ಸಮೀರ್‌ಗೆ ತಪ್ಪದ ಸಂಕಷ್ಟ: ಕಡೂರು ಠಾಣೆಯಲ್ಲಿ ಮತ್ತೊಂದು ದೂರು!
ಯೂಟ್ಯೂಬರ್ ಎಂ.ಡಿ ಸಮೀರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಸದಸ್ಯ ಮಂಜು ಜೈನ್ ಅವರು ಚಿಕ್ಕಮಗಳೂರಿನ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಯ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಧರ್ಮಸ್ಥಳದ…
ಸುಳ್ಯ: ಇಂಜಿನೀಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಸುಳ್ಯದ ಕೇರ್ಪಳದಲ್ಲಿ ಇಂಜಿನೀಯರಿಂಗ್ ವಿದ್ಯಾರ್ಥಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ದುರ್ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಅರಂಬೂರು: ಮನೆಗೆ ನುಗ್ಗಿ ಏಕಾಏಕಿ ದಾಳಿ; ದಾಳಿಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲು
ಅರಂಬೂರು: ಇಲ್ಲಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಎಂಬ ಯುವಕನ ಮೇಲೆ ರಾತ್ರಿ ಯುವಕರ ತಂಡವೊಂದು ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ. ರಾತ್ರಿ ಸುಮಾರು ಗಂಟೆ 9.30pm ರ ವೇಳೆಗೆ ಈ ದಾಳಿ ನಡೆಸಲಾಗಿದೆ.…
7000 ಕೋಟಿ ಒಡೆಯ ಸರಕಾರಿ ಬಸ್ ನಲ್ಲಿ ಪಯಣ ವಿಡಿಯೋ ವೈರಲ್, ಬರೋಬ್ಬರಿ 2ಕೋಟಿ 60 ಲಕ್ಷ ವೀಕ್ಷಣೆ ಕಮೆಂಟ್ ಪೂರ್ತಿ ಇವ ಯಾರೆಂದು ಹುಡುಕಾಟ
ಸುಳ್ಯ: ಸೋಷಿಯಲ್ ಮೀಡಿಯಾ ಅಂದ್ರೆ ಹಾಗೇ, ಯಾವಾಗ ಏನು ವೈರಲ್ ಆಗುತ್ತೆ ಅನ್ನುವುದೇ ತಿಳಿಯುವುದಿಲ್ಲ. ಹೀಗೆ ಸುಳ್ಯದ ಯುವಕನ ಕೇವಲ ಐದು ಸೆಕೆಂಡ್ ಇರುವ ರೀಲ್ಸ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ಕೋಟಿಗಟ್ಟಲೆ ವೀಕ್ಷಣೆ ಹಾಗೂ ಲಕ್ಷಗಟ್ಟಲೆ ಮೆಚ್ಚುಗೆ ಪಡೆದುಕೊಂಡಿದೆ.…
ಅಸಲಿ ಬ್ರ್ಯಾಂಡ್ ಗಳ ನಕಲಿ ವಸ್ತುಗಳ ಮಾರಾಟ – ಪೊಲೀಸ್ ದಾಳಿ
ಮಂಗಳೂರು ಅಗಸ್ಟ್ 20: ಬ್ರ್ಯಾಂಡ್ ಸ್ಪೋರ್ಟ್ ವಸ್ತುಗಳ ನಕಲಿ ಅಥವಾ ಫಸ್ಟ್ ಕಾಫಿಯನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್.ಎನ್ ಉಳ್ಳಾಲ…
ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ಬಗಲಿಗೆ
ಕಡಬ, ಆಗಸ್ಟ್ 20: ಪ್ರಥಮಬಾರಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು ಜಯಭೇರಿ ಬಾರಿಸಿದೆ. ಒಟ್ಟು 13 ಸ್ಥಾನಗಳಲ್ಲಿ 8 ಸ್ಥಾನವನ್ನು ಗೆದ್ದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. 10 ಸ್ಥಾನ ಗೆಲ್ಲುವ ದೊಡ್ಡ ಆತ್ಮವಿಶ್ವಾಸ…
ಬೆಂಗಳೂರು: ₹5 ಕೋಟಿ ಡ್ರಗ್ಸ್ ಸೀಜ್: ಆಫ್ರಿಕಾ ಮೂಲದ ಇಬ್ಬರ ಬಂಧನ
ನಗರದಲ್ಲಿ ಡ್ರಗ್ಸ್ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಅದರಲ್ಲೂ ವಿದೇಶಿಗರ ಹಾವಳಿ ಮಿತಿಮೀರಿದ್ದು, ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ ವಾಸಿಸುತ್ತಿದ್ದಾರೆ. ಇದೀಗ ಪೊಲೀಸರು ಒಂದಷ್ಟು ಪೆಡ್ಲರ್ಗಳ ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಕೋಟಿ ರೂ. ಡ್ರಗ್ಸ್ ಸೀಜ್ ಮಾಡಿದ್ದಾರೆ.…
ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್, ಸುಳ್ಯ ವತಿಯಿಂದ ಗುರುವಂದನಾ ಕಾರ್ಯಕ್ರಮ
ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್(ರಿ). (ಎನ್. ಎಸ್.ಎಸ್. ಹಿರಿಯ ಸ್ವಯಂ ಸೇವಕರ ಸಂಘ ಕೆ.ವಿ.ಜಿ ಪಾಲಿಟೆಕ್ನಿಕ್ ಸುಳ್ಯ) ಇದರ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸಂಘದ ಪ್ರಥಮ ತೈಮಾಸಿಕ ಸಭೆಯನ್ನು ಅರಂಬೂರಿನ “ವಿಕಸನ” ಮನೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಘದ…
ಟಿ.ಎಂ ಶಹೀದ್ ತೆಕ್ಕಿಲ್ ಶಿಫಾರಸ್ಸಿನ ಮೇರೆಗೆ ವೆಂಕಟೇಶ್ ಕೆ.ಜಿ’ಯವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹50 ಸಾವಿರ ಬಿಡುಗಡೆ
ಸುಳ್ಯ ತಾಲ್ಲೂಕು ತೊಡಿಕಾನ ಗ್ರಾಮದ ವೆಂಕಟೇಶ್ ಕೆ.ಜಿ ಇವರ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹50,000 ಹಣವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರ ಶಿಪಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಿಡುಗಡೆ ಮಾಡಿದ್ದಾರೆ.
ಕಡಬ ಪಟ್ಟಣ ಪಂಚಾಯತ್ ಚುನಾವಣೆ; ಎಸ್ ಡಿ ಪಿ ಐ ಕಡಬ ಬ್ಲಾಕ್ ಸಮಿತಿ ವತಿಯಿಂದ ಕೃತಜ್ಞತಾ ಸಭೆ
ಕಡಬ:ಆ.18- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ಬ್ಲಾಕ್ ಸಮಿತಿ ವತಿಯಿಂದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಕೃತಜ್ಞತಾ ಸಭೆಯು ಕಡಬ ಬ್ಲಾಕ್ ಅಧ್ಯಕ್ಷ ಬಶೀರ್ ಕಡಬ ರವರ ಅಧ್ಯಕ್ಷತೆಯಲ್ಲಿ ನಡೆಯಿತು.…
