ಉತ್ತರ ಪ್ರದೇಶ: ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ; 100 ರ ಗಡಿ ದಾಟಿದ ಮೃತರ ಸಂಖ್ಯೆ.!

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತ ಪಟ್ಟವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಮಹಿಳೆಯರು ಸೇರಿದಂತೆ ಕನಿಷ್ಠ 107 ಜನರು ಸಾವನ್ನಪ್ಪಿದ್ದಾರೆ. ಹತ್ರಾಸ್ ಜಿಲ್ಲೆಯ ಸಿಕಂದ್ರ ರಾವ್ ಪ್ರದೇಶದ ರತಿ ಭಾನ್ಪುರ್ ಗ್ರಾಮದಲ್ಲಿ…

ಬೆಳ್ತಂಗಡಿ: ನೇಣು ಬಿಗಿದು ಮಹಿಳೆ ಆತ್ಮಹತ್ಯೆಗೆ ಶರಣು

ನೇಣು ಬಿಗಿದು ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಧರ್ಮಸ್ಥಳದ ಜೋಡುಸ್ಥಾನದಲ್ಲಿ ಜುಲೈ 2ರಂದು ನಡೆದಿದೆ. ಜೋಡುಸ್ಥಾನ ನಿತ್ಯನೂತನ ಭಜನ ಮಂದಿರ ಬಳಿಯ ನಿವಾಸಿ ರಕ್ಷಿತಾ ಜೈನ್ (26) ಆತ್ಮಹತ್ಯೆ ಮಾಡಿಕೊಂಡವರು.ರಕ್ಷಿತಾ ಜೈನ್ ರವರು ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…

ದುಬೈ ಮೂಲದ ಯೂಟ್ಯೂಬರ್ ಜೊತೆ ನಟಿ ಸುನೈನಾ ನಿಶ್ಚಿತಾರ್ಥ?

ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ (Gange Baare Thunge Baare) ಸಿನಿಮಾದ ನಾಯಕಿ ಸುನೈನಾ (Sunaina) ಇದೀಗ ಖಾಸಗಿ ಬದುಕಿನ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ದುಬೈ ಮೂಲದ ಯೂಟ್ಯೂಬರ್ ಖಲೀದ್ (Khalid Al Ameri) ಜೊತೆ ಸುನೈನಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ…

ಕಡಬ: ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಎರಡು ವರ್ಷಗಳ ಹಿಂದೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ, ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ಪೊಲೀಸರು…

ಸುಳ್ಯ: ಎನ್ನೆಂಸಿ ನಿವೃತ್ತ ಉದ್ಯೋಗಿ ಚೋಮ ಬಿ. ನಿಧನ; ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ.

ಸುಳ್ಯದ ನೆಹರು ಮೆಮೋರಿಯಲ್‌ ಕಾಲೇಜಿನಲ್ಲಿ 38 ವರ್ಷಗಳ ಕಾಲ ಬೋಧಕೇತರ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಿ. ಚೋಮ ಬಿ ಅವರು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆ ಕಾಲೇಜಿನ ದೃಶ್ಯ-ಶ್ರವಣ ಕೊಠಡಿಯಲ್ಲಿ ನಡೆಯಿತು. ಅವರ ವೃತ್ತಿ ಬದುಕಿನಲ್ಲಿ ಸಹೋದ್ಯೋಗಿಗಳೊಂದಿಗಿದ್ದ ಒಡನಾಟ, ಕೆಲಸದಲ್ಲಿದ್ದ…

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ

ಉದ್ಯಮಿ ವಿಜಯ್ ಮಲ್ಯ ವಿರುದ್ಧ ಮುಂಬೈ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿ ತೀರ್ಪು ನೀಡಿದೆ. 2007-2012ರ ಅವಧಿಯಲ್ಲಿ ವಿಜಯ್ ಮಲ್ಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ ಲೋನ್ ಪಡೆದಿದ್ದು, ಸಾಲ ಮರುಪಾವತಿ ಮಾಡಿರಲಿಲ್ಲ. ಮಲ್ಯ ಅವರು…

ಕಾಸರಗೋಡು: ಎರಡು ಕಾರುಗಳು ಮಧ್ಯೆ ಅಪಘಾತ; ವೃದ್ಧ ಮೃತ್ಯು, ಮೂವರಿಗೆ ಗಾಯ

ಕಾರುಗಳ ನಡುವೆ ಉಂಟಾದ ಅಪಘಾತದಲ್ಲಿ ವೃದ್ಧರೋರ್ವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಮಂಜೇಶ್ವರ ಸಮೀಪದ ವರ್ಕಾಡಿ ಮೊರತ್ತಣೆಯಲ್ಲಿ ನಡೆದಿದೆ. ಮೀಂಜ ತಲೆಕ್ಕಳ ಡಾ . ಅಬೂಬಕ್ಕರ್ ಮುಸ್ಲಿಯಾರ್ (65) ಸಾವನ್ನಪ್ಪಿದವರು. ಪತ್ನಿ ಅಮೀನಾ , ಪುತ್ರಿ ಸಬೀರಾ ಮತ್ತು ಸುಮಯ್ಯ ಅಪಘಾತದಲ್ಲಿ…

ಇನ್ನೂ ಗೃಹ ಲಕ್ಷ್ಮಿ ಹಣ ಬಂದಿಲ್ವ? ಹಾಗದರೆ ಹೀಗೆ ಚೆಕ್ ಮಾಡಿ

ಜೂನ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಯಜಮಾನಿಯರ ಖಾತೆಗೆ ಜಮಾ ಮಾಡಿದ್ದು, ಹಣ ಬಾರದೇ ಇರುವವರು ತಪ್ಪದೇ ಎನ್‌ ಪಿಸಿಐ ಸಕ್ರಿಯವಾಗಿದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೂ ಗೃಹಲಕ್ಷ್ಮೀ ಹಣ ಜಮಾ ಆಗದೇ ಇದ್ದವರು ಎನ್‍ಪಿಸಿಐ ಸಕ್ರಿಯವಾಗಿದೆಯೇ ಎಂಬುದನ್ನು ಸಾರ್ವಜನಿಕರು…

ಹಾಸನ: ಪತ್ನಿಯನ್ನೇ ಇರಿದು ಕೊಲೆ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್‌

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನು, ಪೊಲೀಸ್ ಕಾನ್‌ಸ್ಟೆಬಲ್‌ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹಾಸನ ನಗರ ಠಾಣೆಯ ಕಾನ್‌ಸ್ಟೆಬಲ್‌ ಲೋಕನಾಥ್…

ಮುಂಬೈ: ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಐವರು..!

ಮುಂಬೈ: ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ ಐದು ಮಂದಿ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ಮುಂಬೈ ಸಮೀಪದ ಲೋನಾವಾಲಾ ಜಲಪಾತದಲ್ಲಿ ಭಾನುವಾರ ಸಂಭವಿಸಿದೆ. ಒಟ್ಟು ಏಳು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದರೂ, ಅವರಲ್ಲಿ ಇಬ್ಬರು ದಡ ಸೇರುವಲ್ಲಿ…