ಪೈಚಾರ್: ಇಲ್ಲಿನ ಶಾಂತಿನಗರದಲ್ಲಿ ವಕೀಲ ರಾಜೇಶ್ ಎಂಬುವವರ ತಾಯಿ ಬಾವಿಗೆ ಜಾರಿಬಿದ್ದ ಘಟನೆ ಆ.19 ರಂದು ನಡೆದಿದೆ. ವಿಷಯ ತಿಳಿದು ಊರವರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ.
ಈ ವೇಳೆ ಪೈಚಾರಿನ ಮುಳುಗು ತಜ್ಞ ಅಬ್ಬಾಸ್ ಶಾಂತಿನಗರ, ಹಾಗೂ ಅಭಿ ತಕ್ಷಣ ಕಾರ್ಯಪ್ರವರ್ತರಾಗಿ, ಮಹಿಳೆಯ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆಯನ್ನು ಸುಳ್ಯ ಆ್ಯಂಬ್ಯುಲೆನ್ಸ್ ಯೂನಿಯನ್ ನ ಎಸ್.ಎಸ್.ಎಫ್ ಆ್ಯಂಬ್ಯುಲೆನ್ಸ್ ಮೂಲಕ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
